ಶನಿವಾರ, ಆಗಸ್ಟ್ 17, 2019
27 °C

ಶಿವಮೊಗ್ಗ: ತುಂಗಾ ನದಿಯಲ್ಲಿ ತೇಲಿದ ಶವ, ವಿದ್ಯುತ್‌ ತಂತಿ ತುಳಿದು ರೈತ ಸಾವು

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಸಾವು ನೋವಿನ ಸುದ್ದಿಗಳು ಕೇಳಿಬರುತ್ತಿದ್ದು, ಶಿವಮೊಗ್ಗದ ತುಂಗಾ ನದಿಯಲ್ಲಿ ಶವವೊಂದು ತೇಲಿಬಂದಿದ್ದು ನದಿ ನೋಡಲು ಬಂದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಮೃತರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಾಕ ಸೇವೆಯ ಸಿಬ್ಬಂದಿ ಶವದ ಹುಡುಕಾಟದಲ್ಲಿದ್ದಾರೆ.

ಶಿಕಾರಿಪುರದ ಚಿಕ್ಕಮಾಗಡಿ ಗ್ರಾಮದಲ್ಲಿ ತೋಟದಲ್ಲಿ ನೀರು ನಿಂತ ಕಾರಣ ಅದನ್ನ ನೋಡಿಕೊಂಡು ಬರಲೆಂದು ತೆರಳಿದ್ದ ರೈತ ಲೋಕೇಶ್(45) ವಿದ್ಯುತ್ ಶಾಕ್‌ನಿಂದಾಗಿ ಮೃತಪಟ್ಟಿದ್ದಾರೆ. ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ, ಜಮೀನಿನ ನೀರಿನೊಂದಿಗೆ ತಂತಿ ತಗುಲಿದೆ.

ಸಾಗರದ ಆನಂದಪುರದಿಂದ ಕೊರ್ಲಿಕೊಪ್ಪಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಯೋಗೇಂದ್ರ (45) ಅವರ ಮೇಲೆ ಮರವೊಂದು ಬಿದ್ದಿದೆ. ಮರಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

Post Comments (+)