ಮಂಗಳವಾರ, ಫೆಬ್ರವರಿ 18, 2020
20 °C

100 ಕೆಜಿ ರೇಷ್ಮೆಗೂಡು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ತೋಟದ ಮನೆಯ ಬೀಗ ಮುರಿದು ರೇಷ್ಮೆಗೂಡನ್ನು ಕಳವು ಮಾಡಲಾಗಿದೆ.

ಗ್ರಾಮದ ರೈತ ಮೂರ್ತಿ ಅವರು ರೇಷ್ಮೆಗೂಡು ಬೆಳೆದು ಮಂಗಳವಾರ ಮಾರುಕಟ್ಟೆಗೆ ಸಾಗಿಸಲು ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಸುಮಾರು 100 ಕೆ.ಜಿ.ಯಷ್ಟಿದ್ದ ಅವನ್ನು ಸೋಮವಾರ ರಾತ್ರಿ ಕಳವು ಮಾಡಲಾಗಿದೆ. ಘಟನೆಯಲ್ಲಿ ₹30 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕಳವು ಮಾಡಲು ಬಂದಿರುವ ಕಳ್ಳರ ಪರ್ಸ್ ಸ್ಥಳದಲ್ಲಿ ಸಿಕ್ಕಿದ್ದು, ಅದರಲ್ಲಿದ್ದ ಭಾವಚಿತ್ರಗಳು ಹಾಗೂ ವಿಳಾಸದ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು