ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ

Last Updated 29 ಮಾರ್ಚ್ 2021, 2:31 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ವಿವಿಧೆಡೆಗಳಲ್ಲಿ ನೆಲೆಸಿರುವ ತಿಗಳಗೌಡ ಸಮುದಾಯದ ಕುಲದೈವ ಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯುತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಹೊಸಪೇಟೆ, ಹೊಂಬಾಳಮ್ಮನ ಪೇಟೆ ಬೀದಿಗಳಲ್ಲಿ ತೋರಣ, ಮಾವಿನ ಸೊಪ್ಪು, ಬಾಳೆಕಂಬಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಅಗ್ನಿಬನ್ನಿರಾಯ ಸ್ವಾಮಿ ಅಲಂಕೃತ ಭಾವಚಿತ್ರಗಳೊಂದಿಗೆ ಮಂಗಳವಾದ್ಯಗಳ ಸಹಿತ ಭವ್ಯವಾದ ಮೆರವಣಿಗೆ ನಡೆಸಲಾಯಿತು.

ಹಿರಿಯ ಮಹಿಳೆಯರು ಅಗ್ನಿಬನ್ನಿರಾಯಸ್ವಾಮಿಯ ಜನಪದ ಕಥನ ಕಾವ್ಯಗಳನ್ನು ಹಾಡಿದರು. ಭಜನೆ ಕಲಾವಿದರು, ಹಾರ್ಮೋನಿಯಂ, ತಬಲ, ತಾಳಗಳೊಂದಿಗೆ ದೇವರ ನಾಮಾವಳಿಗಳನ್ನು ಹಾಡುತ್ತಾ ಸಾಗಿಬಂದರು. ಕುಲದೈವಗಳ ಹೆಸರು ಹೇಳಿ ಜಯಘೋಷ ಕೂಗಿದರು.

ಹೊಸಪೇಟೆಯಲ್ಲಿನ ರಾಮಮಂದಿರಗಳಲ್ಲಿ ಮತ್ತು ಹೊಂಬಾಳಮ್ಮನಪೇಟೆ ಕೋಡಿ ಅರಳಿಕಟ್ಟೆ ಬಳಿ ಅಗ್ನಿಬನ್ನಿರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನೀರು ಮಜ್ಜಿಗೆ ಪಾನಕ, ಕೋಸಂಬರಿ, ಹಲಸಿನ ಹಣ್ಣಿನ ರಸಾಯನ ವಿತರಿಸಲಾಯಿತು.

ಹೊಸಪೇಟೆಯಲ್ಲಿ ತಿಗಳಗೌಡ ಕುಲದ ನಾರಾಯಣಪ್ಪ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ‘ತುಮಕೂರು ತಿಗಳಗೌಡ ಕುಲದ ಕಟ್ಟೆ ಮನೆ ಯಜಮಾನರು, ಗೌಡ, ಆಣೆಕಾರರ ಆದೇಶದಂತೆ ಮೊದಲಬಾರಿಗೆ ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ ಆಚರಿಸುತ್ತಿದ್ದೇವೆ. ಇತರೆ ಸಮುದಾಯಗಳ ಜಯಂತಿ ಆಚರಿಸುತ್ತಿರುವ ಸರ್ಕಾರ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಬೇಕು’ ಎಂದರು.

ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣ ಮಾತನಾಡಿ, ‘ರಾಜ್ಯ ಸರ್ಕಾರ ಒಕ್ಕಲಿಗ ಮತ್ತು ವೀರಶೈವ–ಲಿಂಗಾಯಿತ, ಕುರುಬ ಸಮುದಾಯಕ್ಕೆ ಮಾತ್ರ ತಲಾ ₹500 ಕೋಟಿ ಅನುದಾನ ನೀಡಿದ್ದು, ತಿಗಳಗೌಡ ಸಮುದಾಯದವನ್ನು ಕಡೆಗಣಿಸಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ನಮಗೂ ಸಮಪಾಲು ಕೊಡಬೇಕು’ ಎಂದರು.

ರಂಗನಾಥ, ನರಸಿಂಹಯ್ಯ, ನರಸಿಂಹಮೂರ್ತಿ, ಗುರುಸಿದ್ದಪ್ಪ, ಲಿಂಗರಾಜು, ಶಿವಲಿಂಗಯ್ಯ, ಅಂಕಣ್ಣ, ಡ್ರೈವರ್ ಹನುಮಂತಯ್ಯ, ಸಿದ್ದಗಂಗಮ್ಮ, ರೇಣುಕಮ್ಮ ಇದ್ದರು. ಪುರಸಭೆ ಸದಸ್ಯ ಅಶ್ವತ್ಥ, ನರಸಿಂಹಮೂರ್ತಿ, ಲಕ್ಷ್ಮಿರಂಗನಾಥ ಸ್ವಾಮಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ಕೆಂಪಣ್ಣ, ಆಣಕಾರರು ಸಿದ್ದೇಗೌಡ, ಗೋಪಾಲ ಕೃಷ್ಣ, ಯತೀಶ್, ರಾಜಣ್ಣ, ರವಿಕುಮಾರ್, ಜಗನ್ನಾಥಯ್ಯ, ಯತೀಶ್, ಹೋಟೆಲ್ ರೇವಣ್ಣ ಕುಲಮೂಲದ ಬಗ್ಗೆ ಮಾತನಾಡಿದರು.

ರಂಗಯ್ಯ, ತಿಗಳಗೌಡ ರಂಗಸ್ವಾಮಯ್ಯ, ಲೇಖಕ ಡಿ.ರಾಮಚಂದ್ರಯ್ಯ, ಪುರಸಭೆ ಸದಸ್ಯರಾದ ಜಯರಾಮು, ವೆಂಕಟರಾಮ್, ಮಾಜಿ ಸದಸ್ಯ ಶಿವಶಂಕರ್, ಸಿದ್ದಪ್ಪ, ಲಕ್ಷ್ಮೀದೇವಿ ರವಿಕುಮಾರ್, ಗೋವಿಂದರಾಜು, ಜಗಧೀಶ್,ರಮೇಶ್, ಶೇಖರ್, ನಾಗರಾಜು, ರಂಗಸ್ವಾಮಿ, ಚೇತನ್,ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT