ರಾಮನಗರ: ‘ದೇಶದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕಾದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾರ್ಗದ ಪಾಲನೆ ಅನಿವಾರ್ಯವಾಗಿದೆ. ಅವರು ಕೊಟ್ಟಿರುವ ಶ್ರೇಷ್ಠವಾದ ಸಂವಿಧಾನದ ಜೊತೆಗೆ ಅವರ ಜೀವನಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ತಾರತಮ್ಯವಿಲ್ಲದ ಸಮಾಜ ನಿರ್ಮಾಣ ಸಾಧ್ಯ’ ಎಂದು ಲೇಖಕ ಹಾಗೂ ತಹಶೀಲ್ದಾರ್ ಹೊ.ಬ. ನಾಗಸಿದ್ದಾರ್ಥ್ ಅಭಿಪ್ರಾಯಪಟ್ಟರು.

ನಗರದ ಜಾನಪದ ಲೋಕದಲ್ಲಿ ಭಾನುವಾರ ನಡೆದ ಕರ್ನಾಟಕ ಭೀಮ್ ಸೇನೆ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಭೀಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಜಾತಿ ಆಧರಿತ ಮೇಲು–ಕೀಳು ಎಲ್ಲಿಯವರೆಗೆ ಇರುತ್ತದೊ, ಅಲ್ಲಿಯವರೆಗೆ ಸಮಾಜವು ಅಸಮಾನತೆ ಹೋಗುವುದಿಲ್ಲ’ ಎಂದರು.

‘ಆಧುನಿಕ ಕಾಲದಲ್ಲೂ ಅಸ್ಪೃಶ್ಯತೆ ಆಚರಣೆಯು ಜೀವಂತಾಗಿದೆ. ಆದರೂ, ಈ ಬಗ್ಗೆ ಸಮಾಜದಲ್ಲಿ ಹಗುರವಾಗಿ ಮಾತನಾಡುವವರಿದ್ದಾರೆ. ಅಸ್ಪೃಶ್ಯತೆಯ ನೋವು ತಿಳಿಯಬೇಕಾದರೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದಬೇಕು. ಅಸ್ಪೃಶ್ಯತೆಯನ್ನು ನೋಡಿದಾಗ ಆಗುವ ನೋವಿಗಿಂತ ಅನುಭವಿಸುವ ನೋವಿನ ತೀವ್ರತೆ ಹೆಚ್ಚು’ ಎಂದು ತಿಳಿಸಿದರು.

ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಮಾತನಾಡಿ, ‘ದನಿ ಇಲ್ಲದವರ ದನಿಯಾದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವರಿಗೆ ಸಮಾನತೆಯಿಂದ ಬದುಕುವ ಹಕ್ಕುಗಳನ್ನು ಕೊಟ್ಟರು. ಆದರೂ ಶೋಷಿತ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಇಂದಿಗೂ ಹಿಂದುಳಿದಿದ್ದಾರೆ. ಅಂಬೇಡ್ಕರ್ ಕನಸಿನ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಬೇಕು’ ಎಂದರು.

ಪ್ರಶಸ್ತಿ: ಬಿಡದಿ ಪುರಸಭೆ ಮಾಜಿ ಸದಸ್ಯ ಶಿವಕುಮಾರ್, ಹಿರಿಯ ದಲಿತ ಹೋರಾಟಗಾರ ಶಿವಲಿಂಗಯ್ಯ, ಹಿರಿಯ ಪತ್ರಕರ್ತ ಚಲುವರಾಜು, ಚಲವಾದಿ ಮಹಾಸಭಾ ಮುಖಂಡ ಮಂಜು, ಕಸ್ತೂರಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಂಜನಪ್ಪ, ಯುವ ಮುಖಂಡ ರವಿ ಬುದ್ಧಿಸ್ಟ್, ನೀಲಿ ರಮೇಶ್, ಜಾನಪದ ಕಲಾವಿದರಾದ ಪಲ್ಲವಿ, ಸೋಬಾನೆ ಬೋರಮ್ಮ, ರವಿ ವೀರಭದ್ರಯ್ಯ, ಹೊಸೂರು ಆನಂದ್, ಕುಮಾರಸ್ವಾಮಿ, ಕೆ.ಪಿ. ನೀಲವೇಣಿ, ವೈ.ಟಿ. ಹಳ್ಳಿ ಶಿವು, ಆನಂದ್, ರಾಧಾಕೃಷ್ಣ ಸೇರಿದಂತೆ 20 ಮಂದಿಗೆ ‘ಭೀಮ ಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿಡದಿ ರೋಟರಿ ಮಲ್ಲೇಶ್, ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ವಿನೋದ್ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಜಿಲ್ಲಾ ಉಸ್ತುವಾರಿ ಕಲ್ಲುಗೋಪಳ್ಳಿ ಲೋಕೇಶ್, ಯುವ ಘಟಕ ಜಿಲ್ಲಾಧ್ಯಕ್ಷ ಸಿದ್ದಪ್ಪಾಜಿ, ಕುಮಾರ್, ಬನಶಂಕರಿ ನಾಗು, ಸುರೇಶ್ ಗವಿಯಪ್ಪ ಮಂಜುನಾಥ್, ವಿಜಯಕುಮಾರ್, ಜೈಭೀಮ್ ಜಗದೀಶ್, ಹೇಮಂತ್ ಇಟ್ಟಮಡು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.