‘ಮನೆಯಿಂದ ನಾಡಿಗೆ ವ್ಯಾಪಿಸಿದ ಚಳವಳಿ’
‘ಅಸ್ಪೃಶ್ಯತೆಯನ್ನು ಅಳಿಸುವ ಈ ಚಳುವಳಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ನಮ್ಮ ಮನೆಯಲ್ಲಿ 12 ವರ್ಷಗಳ ಹಿಂದೆ ಶುರುವಾಯಿತು. ಇದೀಗ ನಮ್ಮ ಜಿಲ್ಲೆ ದಾಟಿ ರಾಜ್ಯದ ಬೇರೆ ಜಿಲ್ಲೆ ಹಾಗೂ ಪಕ್ಕದ ರಾಜ್ಯಕ್ಕೂ ವ್ಯಾಪಿಸಿದೆ. ಗೃಹ ಪ್ರವೇಶದಿಂದ ಶುರುವಾಗಿ ನಂತರ ಸಹ ಭೋಜನ ಸಮಾನತೆಯ ಟೀ ದೇವಸ್ಥಾನ ಪ್ರವೇಶ ಒಂದೇ ಭಾವಿ ಮರು ಮದುವೆವರೆಗೆ ಚಾಚಿಕೊಂಡಿದೆ. ಇದುವರೆಗೆ 600ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಜಾತೀಯತೆ ವಿರುದ್ದ ಸುಮಾರು ಮೂರು ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದೇವೆ. 30ಕ್ಕೂ ಹೆಚ್ಚು ಮರು ಮದುವೆ ನಡೆದಿದೆ’ ಎಂದು ಅರಿವು ಭಾರತದ ಸಂಚಾಲಕ ಡಾ. ಶಿವಪ್ಪ ಹೇಳಿದರು.