ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಹಾಲಶೆಟ್ಟಿಹಳ್ಳಿಯಲ್ಲಿ ಹೊಸ ಅವರೆ ತಳಿ ಎಚ್.ಎ.–5 ತರಬೇತಿ ಕಾರ್ಯಕ್ರಮ ನಡೆಯಿತು.

ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ರಾಜೇಂದ್ರ ಪ್ರಸಾದ್ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳ ‘ಅವರೆ-5’ ಎಂಬ ಹೊಸ ತಳಿ ಅಭಿವೃದ್ಧಿಪಡಿಸಿ 2022ರಲ್ಲಿ ಬಿಡುಗಡೆಗೊಳಿಸಿದೆ. ಈ ತಳಿ 75ರಿಂದ 80 ದಿನಗಳ ಅವಧಿಯಲ್ಲಿ ಹಸಿಕಾಯಿ ಕಟಾವಿಗೆ ಬರುವ ಅಲ್ಪಾವದಿ ತಳಿ ಎಂದರು.

ಹೂಗಳ ಬಣ್ಣ ಹಸಿರು: ಬಲಿತ ಕಾಯಿಗಳಲ್ಲಿ ತಿಳಿಕಂದು ಬಣ್ಣದ 2-3 ಗುಂಡನೆಯ ಬೀಜಗಳಿದ್ದು ವಿಶೇಷವಾಗಿ ನಾಟಿ ಅವರೆಗೆ ಇರುವಂತೆ ಸೊಗಡು ಹೊಂದಿದ್ದು, ಕಾಯಿಗಳು ನೋಡಲು ಆಕರ್ಷಕವಾಗಿರುತ್ತವೆ ಎಂದು ತಿಳಿಸಿದರು.

ಕೇಂದ್ರದ ವಿಜ್ಞಾನಿ ಪ್ರಮೋದ್ ಮಾತನಾಡಿ, ಪ್ರತಿ ಎಕರೆಗೆ ಹಸಿಕಾಯಿ 10ರಿಂದ 12 ಕ್ವಿಂಟಲ್ ಹಾಗೂ ಕಾಳು 3ರಿಂದ 4 ಕ್ವಿಂಟಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಕೇವಲ ಮೂರು ತಿಂಗಳಿಗೆ ಕಾಯಿ ಕಟಾವಿಗೆ ಬರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 30 ಜನ ರೈತರಿಗೆ ಅವರೆ ಬಿತ್ತನೆ ಬೀಜ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.