ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ಕಟ್ಟಲು ಮುಂದಾದ ಬಾಗೇಗೌಡ

Last Updated 26 ಜೂನ್ 2019, 16:37 IST
ಅಕ್ಷರ ಗಾತ್ರ

ಮಾಗಡಿ: ರೈತರು, ಬೀದಿ ವ್ಯಾಪಾರಿಗಳು ಮತ್ತು ಕುರಿಮೇಕೆ ಮಾರುವವರಿಂದ ಸುಂಕ ವಸೂಲಿ ಮಾಡಬಾರದು. ಕೆಂಪೇಗೌಡರ ಹೆಸರಿನಲ್ಲಿ ತೆರಿಗೆಯನ್ನು ವೈಯಕ್ತಿಕವಾಗಿ ಕಟ್ಟುವುದಾಗಿ ಸಮಾಜ ಸೇವಕ ಕೆ.ಬಾಗೇಗೌಡ ಹೇಳಿದರು.

‘ತಾಲ್ಲೂಕಿನಲ್ಲಿ ಬರಗಾಲ ಇರುವುದರಿಂದ ರೈತರುಬದುಕುವುದು ದುಸ್ತರವಾಗಿದೆ. ರೈತರ ಮಕ್ಕಳು ಮಳೆ ಬೆಳೆ ಇಲ್ಲದೆ ನಗರದತ್ತ ವಲಸೆ ಹೋಗುತ್ತಿದ್ದಾರೆ. ಕೆಂಪೇಗೌಡ ಜಯಂತಿ ಅಂಗವಾಗಿ ಪಟ್ಟಣದ ಸಂತೆ ಸುಂಕವನ್ನು ಕಟ್ಟುತ್ತೇನೆ. 5 ವರ್ಷಗಳಿಂದಲೂ ಸುಗ್ಗನಹಳ್ಳಿ ಮತ್ತು ತಿರುಮಲೆ ರಂಗನಾಥ ಸ್ವಾಮಿ ದನಗಳ ಜಾತ್ರೆಗೆ ರಾಸುಗಳೊಂದಿಗೆ ಆಗಮಿಸುತ್ತಿರುವ ರೈತರ ಸುಂಕವನ್ನು ಕಟ್ಟಿಕೊಂಡು ಬಂದಿದ್ದೇನೆ. ಕುದೂರು ಸಂತೆಯ ಸುಂಕವನ್ನು ರೈತರಿಂದ ವಸೂಲು ಮಾಡುವುದು ಬೇಡ. ಕೆಂಪೇಗೌಡ ಧರ್ಮಕಾರ್ಯ ಮುಂದುವರಿಸುವ ಉದ್ದೇಶವಿದೆ. ರೈತಕುಟುಂಬದ ಋಣ ತೀರಿಸಲು, ನಾವು ಸಂಪಾದಿಸಿದ ಹಣದಲ್ಲಿ ನೆರವಾಗುವುದಾಗಿ ಅವರು ಹೇಳಿದರು.
ಜುಟ್ಟನಹಳ್ಳಿ ಮಾರೇಗೌಡ, ಕೆಇಬಿ ಚಂದ್ರಶೇಖರ್‌, ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT