ಶನಿವಾರ, ಜೂನ್ 12, 2021
24 °C

ವಿದ್ಯುತ್‌ ಸ್ಪರ್ಶ: ಕರಡಿ ಮರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಬಳಿ ಮಂಗಳವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ಎಂಟು ತಿಂಗಳ ಕರಡಿ ಮರಿ ಮೃತಪಟ್ಟಿತು.

ರೈತರ ಜಮೀನಿಗೆ ವಿದ್ಯುತ್ ಸರಬರಾಜಿಗಾಗಿ ಹಾಕಲಾದ ಟ್ರಾನ್ಸ್‌ಫಾರ್ಮರ್‌ನ ಗ್ರೌಂಡಿಂಗ್‌ ಗುಂಡಿಯಲ್ಲಿ ವಿದ್ಯುತ್ ಪ್ರವಹಿಸುತಿತ್ತು. ಇಲ್ಲಿಗೆ ಬಂದ ಕರಡಿ ಮರಿ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದ ಸಂದರ್ಭವೂ ಕಂಬದಲ್ಲಿ ವಿದ್ಯುತ್‌ ಹರಿಯುತ್ತಿದ್ದು, ಸ್ಥಳೀಯರು ಬೆಸ್ಕಾಂಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಿದರು. ಪಶು ವೈದ್ಯ ಡಾ. ನಜೀರ್‌ ಅಹಮ್ಮದ್‌ ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅದರ ಕಳೇಬರವನ್ನು ಸುಡಲಾಯಿತು. ಎಸಿಎಫ್‌ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‍ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು