ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಹೊಸದುರ್ಗದಲ್ಲಿ ವಿಕಸಿತ ಭಾರತ ಯಾತ್ರೆ

Published 5 ಜನವರಿ 2024, 4:30 IST
Last Updated 5 ಜನವರಿ 2024, 4:30 IST
ಅಕ್ಷರ ಗಾತ್ರ

ಕನಕಪುರ: ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಸವಲತ್ತು ಮತ್ತು ಯೋಜನೆಗಳನ್ನು ಸಾರ್ವಜನಿಕವಾಗಿ ತಿಳಿಸಿ ಜಾಗೃತಿ ಮೂಡಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಗುರುವಾರ ನಡೆಯಿತು.

ಕೇಂದ್ರದ ಬೃಹತ್‌ ಕೈಗಾರಿಕಾ ರಾಜ್ಯ ಸಚಿವ ಕೃಷ್ಣಲಾಲ್‌ ಗುರ್ಜಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣರು, ಬುಡಕಟ್ಟು ಸಮುದಾಯ, ಮಹಿಳೆಯರು, ಹಿಂದುಳಿದವರು, ರೈತರ ಕಲ್ಯಾಣಕ್ಕಾಗಿ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ನರೇಗಾ ಯೋಜನೆ, ಜಲಜೀವನ್‌ ಮಿಷನ್‌, ಉಜ್ವಲ್‌ ಯೋಜನೆಗಳಿಂದ ಗ್ರಾಮೀಣ ಅಭಿವೃದ್ಧಿ ಆಗುತ್ತಿದೆ ಎಂದರು.

ವಿಧಾನ ಪ‍ರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ ಮಾತನಾಡಿ, ನರೇಗಾ ಯೋಜನೆ ಈ ಭಾಗದಲ್ಲಿ ಹೆಚ್ಚು ಅನುಷ್ಠಾನಗೊಂಡಿದೆ. ಇದರಿಂದ ರೈತರು ಹೆಚ್ಚು ಪ್ರಗತಿ ಕಂಡಿದ್ದಾರೆ ಎಂದರು.

‌ಕಾರ್ಯಕ್ರಮದಲ್ಲಿ ಪಿಡಿಒ ಎನ್‌.ಎಸ್‌.ರಘು, ಪಂಚಾಯಿತಿ ಸದಸ್ಯರಾದ ರಾಜೇಂದ್ರ, ನಾಗರಾಜು, ರಾಮಚಂದ್ರ, ಮಧುಸೂಧನ್‌ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT