ಮಾಗಡಿ: ಬೆಂಗಳೂರಿನಿಂದ ಮಾಗಡಿಗೆ ಬರುತ್ತಿದ್ದ ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪಟ್ಟಣದ ಗಾಣಿಗರ ಬೀದಿ ನಿವಾಸಿ ಸುನೀಲ್ (24) ಮೃತ ಯುವಕ.

ಬೆಂಗಳೂರಿನ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುನೀಲ್, ಕೆಲಸ ಮುಗಿಸಿ ತನ್ನ ಬೈಕ್ನಲ್ಲಿ ಮಾಗಡಿಗೆ ಬರುತ್ತಿದ್ದ ವೇಳೆ ಗುಡೇಮಾರನಹಳ್ಳಿ ಮುಖ್ಯರಸ್ತೆ ಆನಂದ ನಗರ ಸಮೀಪ ಮಾಗಡಿ ಕಡೆಯಿಂದ ಗುಡೇಮಾರನಹಳ್ಳಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಪಟ್ಟಣದ ತಟವಾಳು ರಸ್ತೆ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಮೃತರ ಅಂತ್ಯಕ್ರಿಯೆ ನಡೆಯಿತು.
ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.