ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಬಿಸಿ ಬೇಳೆಬಾತ್‌ ಬಿದ್ದು ಬಿಸಿಯೂಟ ಕಾರ್ಯಕರ್ತೆ ಸಾವು

Published 18 ಮಾರ್ಚ್ 2024, 23:26 IST
Last Updated 18 ಮಾರ್ಚ್ 2024, 23:26 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿನ ಆರ್‌.ಇ.ಎಸ್ ಸಂಸ್ಥೆ ಆರ್.ಎಂ.ಪಿ.ಎಚ್.ಎಸ್ ಗ್ರಾಮಾಂತರ ಬಾಲಕರ ಪ್ರೌಢ ಶಾಲೆಯಲ್ಲಿ ಒಲೆಯಿಂದ ಬಿಸಿ ಬೇಳೆ ಬಾತ್ ಕೆಳಗಿಡುವಾಗ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದ ಬಿಸಿಯೂಟ ಕಾರ್ಯಕರ್ತೆ ಸೋಮವಾರ ಮೃತಪಟ್ಟಿದ್ದಾರೆ.

ಶಾಲೆಯಲ್ಲಿ ಕೆಲವು ವರ್ಷಗಳಿಂದ ಬಿಸಿಯೂಟ ತಯಾರಿಸುತ್ತಿದ್ದ ಹಲಸಿನಮರದೊಡ್ಡಿ ಗೌರಮ್ಮ (55) ಮಾರ್ಚ್ 15ರಂದು ಪಾತ್ರೆ ಕೈ ಜಾರಿ ಬಿಸಿ ಬೇಳೆ ಬಾತ್‌ ಮೈ ಮೇಲೆ ಚೆಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ  ಸೇರಿಸಲಾಗಿತ್ತು. ಇವರೊಂದಿಗೆ ಮತ್ತಿಬ್ಬರು ಸಹಾಯಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT