ಮಾಗಡಿ: ಜಿಲ್ಲೆಯಲ್ಲಿ 15,000 ಬಿಪಿಎಲ್ ಕಾರ್ಡ್ಗಳನ್ನು ಕೇಂದ್ರ ಸರ್ಕಾರದ ಹೊಸ ಮಾನದಂಡ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ತಿಳಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ಐದು ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ವಾರ್ಷಿಕ ₹1.20ಲಕ್ಷಕ್ಕಿಂತ ಹೆಚ್ಚು ಆದಾಯ, 3.5 ಎಕರೆಗಿಂತ ಹೆಚ್ಚು ಜಮೀನು, ಜಿಎಸ್ಟಿ ದಾಖಲೆ ಅಥವಾ ಸ್ವಂತ ಕಾರು ಹೊಂದಿರುವವರ ಕಾರ್ಡ್ ರದ್ದುಗೊಳಿಸಲಾಗುತ್ತಿದೆ. ನಿಜವಾದ ಅರ್ಹರು ತಮ್ಮ ಕಡಿಮೆ ಆದಾಯ ದೃಢಪಡಿಸಿ ಮತ್ತೆ ಅರ್ಜಿ ಸಲ್ಲಿಸಬಹುದು ಎಂದರು.

ರದ್ದಾದ ಕಾರ್ಡ್ಗಳ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಅಂಟಿಸುವಂತೆ ಮತ್ತು 20 ದಿನಗಳ ಕಾಲ ಸರಿಯಾಗಿ ಪಡಿತರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸಿದ ಬಸ್ ನಿಲ್ದಾಣದ ಟಿಸಿ ಅವರನ್ನು ವರ್ಗಾವಣೆ ಮಾಡಲು ಸೂಚಿಸಲಾಯಿತು.

ಗೃಹಲಕ್ಷ್ಮಿ ಯೋಜನೆ ಮೂಲಕ ಬದುಕು ಕಟ್ಟಿಕೊಂಡ ತಾಲ್ಲೂಕಿನ ಕೆ.ವಿ ತಾಂಡಾದ ಮಮತಾ ಹಾಗೂ ವೃದ್ದೆ ಲಿಂಗಮ್ಮ ಅವರನ್ನು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ತಾ.ಪಂ.ಇಒ ಜೈಪಾಲ್, ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ತಾಲ್ಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ರಾಮನಗರ ತಾಲ್ಲೂಕು ಅಧ್ಯಕ್ಷ ರಾಜು, ಜಿಲ್ಲಾ ಸದಸ್ಯರಾದ ಜಗಣ್ಣ, ವನಜ, ಚನ್ನಪಟ್ಟಣ ತಾಲ್ಲೂಕಿನ ಚಂದನ, ತಾಲ್ಲೂಕು ಸದಸ್ಯರಾದ ರಾಮಯ್ಯ, ತೇಜು, ಕೆಂಪೇಗೌಡ, ಲಿಂಗೇಶ್, ಶಾಂತಬಾಯಿ, ಯಾಸಿನ್, ರಂಗಸ್ವಾಮಿ, ಡಿಪೊ ಮ್ಯಾನೇಜರ್ ಮಂಜುನಾಥ್, ಸಿಡಿಪಿಒ ಸುರೇಂದ್ರ, ಆಹಾರ ಶಿರಸ್ತೆದಾರ ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.