ಬುಧವಾರ, ಜನವರಿ 29, 2020
30 °C

ಲೋಕ ಕಲ್ಯಾಣಾರ್ಥ ಚಂಡಿ ಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಪಟ್ಟಣದ ಚರ್ಚ್ ರಸ್ತೆಯ ಮಹಾಲಕ್ಷ್ಮಿ ಬಡಾವಣೆಯಲ್ಲಿ ಸೋಮವಾರ ಲೋಕ ಕಲ್ಯಾಣಾರ್ಥವಾಗಿ 23 ನೇ ವರ್ಷದ ಚಂಡಿ ಹೋಮ ಏರ್ಪಡಿಸಲಾಗಿತ್ತು.

ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮವನ್ನು ಏರ್ಪಡಿಸಿದ್ದು, ಇದರಿಂದ ಎಲ್ಲರಿಗೂ ಜ್ಞಾನ, ಸಂಪತ್ತು ಮತ್ತು ಸನ್ಮಾರ್ಗ ದೊರಕಲಿ ಎಂಬುದು ನಮ್ಮ ಉದ್ದೇಶ ಎಂದು ಹೋಮದ ಆಯೋಜಕರಾದ ಪ್ರೊ. ಸಂಪಂಗಿ ಅವರು ತಿಳಿಸಿದರು.

ಚಂಡಿ ಹೋಮದಿಂದ ಸಕಲರಿಗೂ ಶಾಂತಿ ನೆಮ್ಮದಿ ದೊರೆತು ಒಳ್ಳೆಯದಾಗಲಿ. ಸಕಲ ಸಮೃದ್ಧಿ ನೀಡಲಿ ಎಂದು ಪ್ರತಿ ವರ್ಷ ಹೋಮ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ದ್ವಿತೀಯ ಶುಕ್ಲ ಪಕ್ಷ ಪೂರ್ವಾಷಾಢ ನಕ್ಷತ್ರದಂದು ಚಂಡಿ ಹೋಮ ಆಯೋಜಿಸಲಾಗಿದೆ. ಇದರ ಜೊತೆಗೆ ನವಗ್ರಹ ಹೋಮ, ಅಷ್ಟದಿಕ್ಪಾಲಕರ ಹೋಮ, ಕಾಳಹೋಮ, ವಾಸ್ತಹೋಮ, ಅಂಕುರಾರ್ಪಣೆ ಹೋಮ ಹಾಗೂ ನಕ್ಷತ್ರ ಹೋಮ ಹಾಗೂ ಸಕಲ ಪೂಜೆ ಮಹೋತ್ಸವ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಲೋಕ ಕಲ್ಯಾಣಕ್ಕೆ ದೇವಿಯ ಚಂಡಿ ಹೋಮಗಳನ್ನು ಅಗತ್ಯವಿದ್ದಾಗ ನೇರವೇರಿಸಿ ಕಷ್ಟ ಕಾರ್ಪಣ್ಯ ದೂರವಾಗುವಂತೆ ಮಾಡಬೇಕು. ಅನಾರೋಗ್ಯಕ್ಕೆ ಈಡಾಗುವ ಭಕ್ತಾದಿಗಳು ಪೂಜೆ ಪುನಸ್ಕಾರದಲ್ಲಿ ತೊಡಗಿ ದೇವಿಯನ್ನು ಪ್ರಾರ್ಥಿಸಿದರೆ ದೇವಿಯ ಆಶೀರ್ವಾದದಿಂದ ಎಲ್ಲವೂ ದೂರವಾಗುತ್ತದೆ. ಪ್ರಸಾದ ಸ್ವೀಕರಿಸಿದಾಗ ಅಂತರಾಳದಲ್ಲಿರುವ ಮಾನಸಿಕ ವೇದನೆ, ಒತ್ತಡ, ಅಶಾಂತಿ ದೂರವಾಗಲಿದ್ದು, ಸಂಪೂರ್ಣ ಅರೋಗ್ಯದಾಯಕ ಪರಿಹಾರ ಸಿಗಲಿದೆ ಎಂದರು.

ನೂರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು. ಮಹಾ ಮಂಗಳಾರತಿ, ಪೂಜೆ ನೆರವೇರಿಸಿ ತೀರ್ಥ ಪ್ರಸಾದ ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು