ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚನ್ನಪಟ್ಟಣ | ಅಳುವುದೇ ಗೌಡರ ಪರಂಪರೆ; ಸೋಲಿನ ಭಯಕ್ಕೆ ಕಣ್ಣೀರು: ಸಿದ್ದರಾಮಯ್ಯ

ಮೊಮ್ಮಗನಿಂದಾಗಿ ಕಣ್ಣೀರು ಹಾಕುತ್ತಿರುವ ಹೆಣ್ಣು ಮಕ್ಕಳಿಗಾಗಿ ಅಳ್ರಿ ಗೌಡ್ರೆ: ಸಿದ್ದರಾಮಯ್ಯ ವಾಗ್ದಾಳಿ
Published : 7 ನವೆಂಬರ್ 2024, 0:25 IST
Last Updated : 7 ನವೆಂಬರ್ 2024, 0:25 IST
ಫಾಲೋ ಮಾಡಿ
Comments
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ತಾಲ್ಲೂಕಿನ ಬೇವೂರಿನಲ್ಲಿ ಬುಧವಾರ ನಡೆದ ಪ್ರಚಾರಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರತ್ತ ಕೈ ಬೀಸಿದರು. ಸಚಿವ ಎಚ್‌.ಸಿ. ಮಹದೇವಪ್ಪ ಮಾಜಿ ಶಾಸಕ ಎಂ.ಸಿ. ಅಶ್ವಥ್ ಇದ್ದಾರೆ

ನಿಖಿಲ್ ಕುಮಾರಸ್ವಾಮಿ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತ ಯಾಚಿಸಿದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಜೆಡಿಎಸ್ ಮುಖಂಡರಾದ ಲೀಲಾದೇವಿ ಆರ್‌.ಪ್ರಸಾದ್ ಎಚ್.ಕೆ.ಕುಮಾರಸ್ವಾಮಿ ಇದ್ದರು 

ನಿಖಿಲ್ ಕುಮಾರಸ್ವಾಮಿ ಪರವಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಪ್ರಚಾರ ನಡೆಸಿದರು
ನಿಖಿಲ್ ಕುಮಾರಸ್ವಾಮಿ ಪರವಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಪ್ರಚಾರ ನಡೆಸಿದರು
ಸಿ.ಡಿ ಸಹೋದರರಿಗೆ ಸಿ.ಡಿ ವಿಡಿಯೊ ಆಡಿಯೊ ಮಾಡುವುದೇ ಕೆಲಸ. ಹಾಸನದಲ್ಲಿ ಮಾಡಿದ ಷಡ್ಯಂತ್ರವನ್ನು ಇಲ್ಲೂ ಮಾಡುತ್ತಿದ್ದಾರೆ. ಯೋಗೇಶ್ವರ್ ಸಂಸ್ಕೃತಿ ಗೊತ್ತಿದೆ. ಇವರೆಲ್ಲ ಸಿ.ಡಿ ಪ್ಲೇಯರ್ಸ್ ಸಂತತಿಯವರು
ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ರಾಜ್ಯದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಜನರ ಹಿತವನ್ನು ಮರೆತಿದೆ. ಉಪ ಚುನಾವಣೆಯಲ್ಲಿ ನಿಖಿಲ್ ಅವರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕು
ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
- ‘ರಾಹುಲ್ ಪ್ರಿಯಾಂಕಾ ಯಾವ ಟಾಕೀಸ್?’
ಚನ್ನಪಟ್ಟಣ (ರಾಮನಗರ): ‘ಉತ್ತರಪ್ರದೇಶದ ಅಮೇಠಿಯಿಂದ ವಯನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಸಹೋದರ ತೆರವು ಮಾಡಿದ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು ಸರಿ ಮಾಡಿಕೊಳ್ಳುವುದು ಬಿಟ್ಟು ಪಕ್ಕದ ತಟ್ಟೆ ನೋಡುವುದನ್ನು ಬಿಡಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ‘ಟೂರಿಂಗ್ ಟಾಕೀಸ್’ ಎಂದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಬುಧವಾರ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಂಟಿಯಾಗಿ ಪ್ರಚಾರ ನಡೆಸಿದ ಅವರು ಎದುರಾಳಿಗಳ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಮಾತಲ್ಲಷ್ಟೇ ಭಗೀರಥ; ಕೃತಿಯಲ್ಲಿ ಅಲ್ಲ’
‘ತಾಲ್ಲೂಕಿನ 17 ಕೆರೆಗಳಿಗೆ ನೀರು ತುಂಬಿಸಿದ್ದೇನೆ ಎನ್ನುವ ವ್ಯಕ್ತಿ ಬಾಯಿ ಮಾತಿನಲ್ಲಿ ಮಾತ್ರ ಭಗೀರಥ. ಕೃತಿಯಲ್ಲಿ ಅಲ್ಲ. ನಾನು ಮತ್ತು ಸದಾನಂದ ಗೌಡ ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ. ಸುಳ್ಳು ಹೇಳಿಕೊಂಡು ತಿರುಗಬಾರದು. ನೀರು ತುಂಬಿಸಲು ಮೂಲ ಕಾರಣವಾದ ಇಗ್ಗಲೂರು ಅಣೆಕಟ್ಟು ನಿರ್ಮಿಸಿದವರು ಯಾರಪ್ಪಾ?’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ಪ್ರಶ್ನಿಸಿದರು. ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲ್ಲೂಕಿನ ತಿಟ್ಟಮಾರನಹಳ್ಳಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು.  ‘ನಾನು ಸಿ.ಎಂ ಆಗಿದ್ದಾಗ ಎಂಜಿನಿಯರ್‌ಗಳನ್ನು ಕರೆತಂದು ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆ ಉದ್ಘಾಟಿಸಿ ಆಗಲೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದೆ. ಸದಾನಂದಗೌಡರು ಸಿ.ಎಂ ಆಗಿದ್ದಾಗ 17 ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಯೋಗೇಶ್ವರ್ ಏನೂ ಮಾಡಲಿಲ್ಲ. ಹಿಂದೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಯೋಗೇಶ್ವರ್ ಯಾಕೆ ಆ ಕೆಲಸ ಮಾಡಿಸಲಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT