ಚನ್ನಪಟ್ಟಣ: ತಾಲ್ಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ. ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಲೋಕೇಶ್ ಅವರ ಪತ್ನಿ ಚಂದ್ರಕಲಾ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೂನ್ 24 ರಂದು ನನ್ನ ಪತಿ ಲೋಕೇಶ್ ಅವರ ಮೃತದೇಹ ಕಣ್ವ ಜಲಾಶಯದ ಬಳಿ ಪತ್ತೆಯಾಗಿತ್ತು. ಅವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅವರ ಸಾವಿನ ಹಿಂದೆ ವಿರೋಧಿಗಳ ಷಡ್ಯಂತ್ರವಿದೆ ಎಂದು ನಮ್ಮ ಕುಟುಂಬಕ್ಕೆ ಅನುಮಾನ ಇದೆ. ಪೊಲೀಸರು ಸಹ ತನಿಖೆ ವಿಚಾರದಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ’ ಎಂದು ಅರೋಪಿಸಿದರು.

‘ಪತಿ ಕಾಣೆಯಾದ ಮರುದಿನವೇ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಮರಣೋತ್ತರ ಪರೀಕ್ಷೆ ನಡೆಸಿ ಐದು ದಿನ ಕಳೆದರೂ ಪೊಲೀಸರು ಸೂಕ್ತ ಮಾಹಿತಿ ನೀಡುತ್ತಿಲ್ಲ. ಕುಟುಂಬಕ್ಕೆ ಬೆದರಿಕೆ ಒಡ್ಡಲಾಗುತ್ತಿದೆ. ಕೊಲೆಯನ್ನು ಆತ್ಮಹತ್ಯೆಯಂತೆ ಬಿಂಬಿಸುವ ಮೂಲಕ ಪ್ರಕರಣದ ಹಾದಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಚಂದ್ರಕಲಾ ಆರೋಪ ಮಾಡಿದರು.

ಪೋಲಿಸರು ಸರಿಯಾದ ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಸಿ, ಸಾಕ್ಷಿ ಸಮೇತ ಅಪರಾಧಗಳಿಗೆ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಚಂದ್ರಕಲಾ ಅವರ ಸಹೋದರ ಮನು ಮಾತನಾಡಿ, ಲೋಕೇಶ್ ಅವರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದರ ಬಗ್ಗೆ ಸೂಕ್ತವಾಗಿ, ನ್ಯಾಯಯುತವಾಗಿ ತನಿಖೆ ನಡೆದರೆ ಸತ್ಯ ಹೊರ ಬರುತ್ತದೆ ಎಂದರು.

ಚಂದ್ರಕಲಾ ಅವರ ತಂದೆ ರಾಮಣ್ಣ, ಗ್ರಾ.ಪಂ. ಸದಸ್ಯ ಸತೀಶ್, ಸಿದ್ದಲಿಂಗೇಗೌಡ, ಬೋರೇಗೌಡ, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.