ಚುಳುಕನಗಿರಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿ ಹೋಗುತ್ತಿದ್ದು ಆಗಾಗ ರಾತ್ರಿ ಕಾಡ್ಗಿಚ್ಚು ವ್ಯಾಪಿಸುತ್ತದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಿಲ್ಲ
ಪ್ರಭುಸ್ವಾಮಿ, ಮುಖ್ಯಸ್ಥರು ಗಿರಿ ಪ್ರದಕ್ಷಣೆ ಸಮಿತಿ ಚುಳುಕನಗಿರಿ
ಚುಳುಕನಗಿರಿ ಬೆಟ್ಟವು ಪವಿತ್ರವಾದ ಸ್ಥಳವಾಗಿದೆ. ಪ್ರವಾಸಿಗರ ನೆಚ್ಚಿನ ತಾಣವೂ ಆಗಿರುವ ಈ ಸ್ಥಳದಲ್ಲಿ ಮದ್ಯ ಸೇವನೆ ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಹಾಗಾಗಿ ಬೆಟ್ಟದ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅಕ್ರಮ ಮದ್ಯ ಸೇವನೆ ಸೇರಿದಂತೆ ಇತರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು.