ಚನ್ನಪಟ್ಟಣ: ಬೆಂಗಳೂರಿನ ಶಿವಾಜಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಮೇ 18ರಂದು ಕಾರ್ಯನಿರತ ಛಾಯಾ ಚಿತ್ರಗ್ರಾಹಕರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಕ್ಯಾಮೆರಾ ಸಲಕರಣೆಗಳನ್ನು ನಾಶಮಾಡಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತು.

ವೃತ್ತಿಪರ ಛಾಯಾಗ್ರಹಕರಿಗೆ ಕಾರ್ಯಕ್ರಮ ಸೇರಿದಂತೆ ಹಲವು ಕಡೆ ಹಲ್ಲೆಗಳು ನಡೆಯುತ್ತಿವೆ. ಇದರಿಂದಾಗಿ ವೃತ್ತಿಪರ ಛಾಯಾಗ್ರಾಹಕರು ತಮ್ಮ ಕರ್ತವ್ಯ ನಿರ್ವಹಿಸಲು ಬಹಳ ಸಮಸ್ಯೆಯಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಘಟನೆ ವೃತ್ತಿಪರ ಛಾಯಾಚಿತ್ರಗ್ರಾಹಕರ ಮೇಲೆ ತೀವ್ರತರವಾದ ಆಘಾತ ಉಂಟುಮಾಡಿದೆ. ಹಾಗೆಯೆ ಇತ್ತೀಚೆಗೆ ಕ್ಯಾಮೆರಾ ಪರಿಕರಗಳ ಕಳ್ಳತನ, ಸ್ಟುಡಿಯೋಗಳ ಕಳ್ಳತನ, ಛಾಯಾಗ್ರಾಹಕರನ್ನು ರಸ್ತೆಗಳಲ್ಲಿ ತಡೆದು ಕ್ಯಾಮೆರಾ ಪರಿಕರಗಳನ್ನು ಕಿತ್ತುಕೊಂಡು ಹೋಗಿರುವ ಘಟನೆಗಳು ನಡೆಯುತ್ತಿವೆ. ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಡಿ.ಎಂ. ರವಿ, ಛಾಯಾಚಿತ್ರಗ್ರಾಹಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ವೃತ್ತಿಪರ ಛಾಯಾಗ್ರಹಾಕರಾದ ಚಂದ್ರು, ಶ್ರೀಕಾಂತ್, ಮಹೇಶ್, ಮನು, ಪ್ರಕಾಶ್, ರಾಂಪುರ ರವಿ, ಬಾಬು, ಬಸವ, ಅಬ್ರಹಾರ್, ಕಿರಣ್, ಉಮೇಶ್, ಪ್ರಶಾಂತ್, ಮಂಜು, ಹರೀಶ್, ತಗಚಗೆರೆ ನಂದ, ವೆಂಕಟೇಶ್, ವಿನಾಯಕ್, ಅಮೀರ್, ಹರೂರು ರವಿ, ಬಾಬು, ಸಲೀಂ, ಶಶಾಂಕ್, ಆನಂದ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.