ಮಂಗಳವಾರ, ಅಕ್ಟೋಬರ್ 15, 2019
25 °C

ಹಬ್ಬಗಳು ನಾಡಿನ ಸಂಸ್ಕತಿ ಸಂಕೇತ

Published:
Updated:
Prajavani

ಕೋಡಿಹಳ್ಳಿ (ಕನಕಪುರ): ‘ಹಬ್ಬಗಳು ನಾಡಿನ ಸಂಸ್ಕೃತಿ ಸಂಕೇತ. ಅದರಲ್ಲಿ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ’ ಎಂದು ಮುಖ್ಯ ಶಿಕ್ಷಕಿ ಆಂಥೋಣಿ ಮೇರಿ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಬಳಿಯಿರುವ ಡಿಕೆಎಸ್‌ ಹಿಪ್ಪೋ ಕ್ಯಾಂಪಸ್‌ ಶಾಲೆಯಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬೊಂಬೆ ಪ್ರದರ್ಶನ, ಮಕ್ಕಳಿಗೆ ವೇಷಭೂಷಣೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಕೃತಿ, ಸಂಸ್ಕಾರದಿಂದಲೇ ಹಬ್ಬಗಳು ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು. ಶಾಲೆ ಸಹಶಿಕ್ಷಕಿ ನಾಗವೇಣಿ ದಸರಾ ಬೊಂಬೆಗಳ ಕುರಿತು ಮಾತನಾಡಿದರು. 

 

Post Comments (+)