ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇದೇ 23ರಿಂದ 28ರವರೆಗೆ ಮೇಕೆದಾಟಿನಿಂದ ವಿಧಾನಸೌಧವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಇದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವೂ ಪಾಲ್ಗೊಳ್ಳಲಿದೆ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ಪಿ. ಕೃಷ್ಣೇಗೌಡ ತಿಳಿಸಿದರು.

ರಾಜ್ಯ ಮೇಕೆದಾಟು ಹೋರಾಟ ಸಮಿತಿ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾತ್ವಿಕ ಅಂತ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈವರೆಗೆ ಬಂದು ಹೋಗಿರುವ ಸರ್ಕಾರಗಳು ಮೇಕೆದಾಟು ವಿಚಾರದಲ್ಲಿ ಬರೀ ಪೊಳ್ಳು ಭರವಸೆಗಳನ್ನೇ ನೀಡಿವೆ. ರಾಜ್ಯದಲ್ಲೊಂದು ಸರ್ಕಾರ, ಕೇಂದ್ರದಲ್ಲೊಂದು ಪಕ್ಷದ ಸರ್ಕಾರ ಇದ್ದಾಗಲಂತೂ ಕನ್ನಡಿಗರ ನೋವನ್ನು ಕೇಳಿದವರಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸಿದ ಹೆಚ್ಚಿನ ಸರ್ಕಾರಗಳು ತಮಿಳುನಾಡನ್ನೇ ಓಲೈಸಿಕೊಂಡು ಬಂದಿವೆ ಎಂದು
ದೂರಿದರು.

ಸಂಘಟನೆಯ ಗೌರವ ಅಧ್ಯಕ್ಷ ಉಮರ್ ಹಾಜಿ, ಜಿಲ್ಲಾ ಅಧ್ಯಕ್ಷ ಶಿವುಗೌಡ, ಮುಖಂಡರಾದ ಆರ್. ಪ್ರಭು, ಬಿ. ಶಂಕರದಾಸ್, ಮಹಮದ್ ಕುಕ್ಕವಾಡಿ, ರಾಮಚಂದ್ರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.