ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಜ್ಯೋತಿ ನಗರದ ನಿವಾಸಿ ಪ್ರದೀಪ್ ಬಿನ್ ಹಂದಿ ಮರಿಯಪ್ಪ(26), ಮಣಿಕಂಠ ಬಿನ್ ಭರ್ಮ(30), ಸತೀಶ್ (28), ದೊಡ್ಡಾಲಹಳ್ಳಿ ಗ್ರಾಮದ ಶಶಿಕುಮಾರ್ ಅಲಿಯಾಸ್ ಚಂದ್ರಣ್ಣ(36) ಎಂದು ಗುರುತಿಸಲಾಗಿದೆ. ಮೂರು ಜಿಂಕೆಯ ಮಾಂಸ, ಬೇಟೆಯಾಡಲು ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಪತ್ತೆಗಾಗಿ ಶೋಧಕಾರ್ಯ ಆರಂಭಿಸಲಾಗಿದೆ.