ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಮಾವಿಗೆ ವಿಶ್ವಮಾನ್ಯತೆ

ಬಿಡದಿಯ ಎಲ್.ಟಿ.ಜಿ ಆಗ್ರೋ ಇಂಡಸ್ಟ್ರೀಸ್ ಕಂಪನಿಯಿಂದ ರಫ್ತು
Last Updated 1 ಮೇ 2021, 7:45 IST
ಅಕ್ಷರ ಗಾತ್ರ

ಬಿಡದಿ: ಜಿಲ್ಲೆಯ ಮಾವು ಪ್ರಥಮ ಬಾರಿಗೆ ವಿದೇಶಗಳಿಗೆ ರಫ್ತಾಗುತ್ತಿದ್ದು, ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆಯಲು ಸಜ್ಜಾಗಿದೆ.

ಕೊಡಿಯಾಲ ಕರೇನಹಳ್ಳಿಯಲ್ಲಿ ಮಾವು ಎಕ್ಸ್‌ಪೋರ್ಟ್‌ ಘಟಕ ಆರಂಭವಾಗಿದೆ. ಎಲ್.ಟಿ.ಜಿ ಆಗ್ರೋ ಇಂಡಸ್ಟ್ರೀಸ್ ಮೂಲಕ ವಿದೇಶಗಳಿಗೆ ಮೊದಲ ಬಾರಿಗೆ ರಫ್ತಾಗುತ್ತಿದೆ.

ಎಲ್‌.ಟಿ.ಜಿ ಆಗ್ರೋ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷಣ್ ಮಾತನಾಡಿ, ‘ಮ್ಯಾಂಗೋ ವರ್ಲ್ಡ್‌‌ನಲ್ಲಿ ಸುಮಾರು 6 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಉತ್ತಮ ಗುಣಮಟ್ಟದ ಪ್ಯಾಂಕಿಂಗ್ ನಿರ್ವಹಿಸಿ ರಫ್ತಿಗೆ ಒಳ್ಳೆಯ ಗುಣಮಟ್ಟದ ಮಾವನ್ನು ಕಳುಹಿಸಬೇಕಾಗಿರುವುದರಿಂದ ನಾವೆಲ್ಲರು ಕೆಲಸ ಕಾರ್ಯ ನಿರ್ವಹಿಸಬೆಕಾಗಿದೆ. ಈ ಕೋವಿಡ್‌ನಿಂದ ನಮಗೆ ಸ್ವಲ್ಪಮಟ್ಟಿಗೆ ನಷ್ಟ ಉಂಟಾಗಿದ್ದು, ಮೊಟ್ಟಮೊದಲ ಬಾರಿಗೆ ಎಲ್.ಟಿ.ಜಿ ಆಗ್ರೋ ಇಂಡಸ್ಟ್ರೀಸ್ ಕಂಪನಿಯು ದುಬೈಗೆ, ಯುಕೆ, ಯುಸ್, ಲಂಡನ್‌ಗಳಿಗೆ ಮಾವು ರಫ್ತು ಆಗುತ್ತದೆ’ ಎಂದು ತಿಳಿಸಿದರು.

ಕಂಪನಿಯ ಸಿ.ಇ.ಓ ಕಾಂತರಾಜು ಮಾತನಾಡಿ, ‘ಎಲ್.ಟಿ.ಜಿ ಆಗ್ರೋ ಇಂಡಸ್ಟ್ರೀಸ್ ಮಾಡಿರುವ ಉದ್ದೇಶವೆಂದರೆ ನೇರವಾಗಿ ರೈತರಿಂದ ಮಾವು ಖರೀದಿ. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ, ಬೆಲೆಯಲ್ಲಿ ನಿಖರವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಮಾವು ಬೆಳೆಯಲ್ಲಿ ಮುಖ್ಯವಾಗಿ ಗಮನಹರಿಸುತ್ತಿದ್ದೇವೆ. ಕೊವಿಡ್-19 ಎರಡನೇ ಅಲೆಯಲ್ಲಿ ಸಂಕಷ್ಟ ಅನುವಿಸುತ್ತಿದ್ದೇವೆ. ಮಾವಿನ ಈ ಋತುವಿನಲ್ಲಿ ನಾವು ಕೆಲಸ ಮಾಡಲೇಬೇಕಿದೆ’ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನ್ನೇಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಮಾವು ಬೆಳೆ ಒಂದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದವರು ಇಲ್ಲಿಂದ ಮಾವು ಖರೀದಿಸಿ ತಮ್ಮ ಬ್ರ್ಯಾಂಡ್‌ ಎಂದು ರಫ್ತು ಮಾಡುತ್ತಿದ್ದರು. ಆದರೆ ನಾವು ಈಗ ನೇರವಾಗಿ ರಫ್ತು ಮಾಡಲು ಮುಂದಾಗಿದ್ದೇವೆ. ಬೆಲೆಯು ಸಹ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಪ್ರಥಮವಾಗಿ ರಾಮನಗರ ಜಿಲ್ಲೆಯಿಂದ 15 ಮೆಟ್ರಿಕ್ ಟನ್ ಮಾವನ್ನು ಬಿಡದಿಯ ಎಲ್.ಟಿ.ಜಿ ಆಗ್ರೋ ಇಂಡಸ್ಟ್ರೀಸ್ ಖರೀದಿಸಿದ್ದಾರೆ. ಅವರ ಮೂಲಕ ರಫ್ತು ಆಗುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಯಶಸ್ಸು ಕಾಣುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT