ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಅನ್ಯಾಯ ಸಹಿಸಲ್ಲ: ಅನಿತಾ

Last Updated 9 ಮೇ 2020, 9:39 IST
ಅಕ್ಷರ ಗಾತ್ರ

ಕನಕಪುರ: ಲಾಕ್‌ಡೌನ್‌ನಿಂದ ಸಮಸ್ಯೆಯಲ್ಲಿ ಸಿಲುಕಿರುವ ಜನರಿಗೆ ಅನುಕೂಲವಾಗಲೆಂದು ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮನೆ ಮನೆಗೆ ರೇಷನ್‌ ಕಿಟ್‌ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನನ ಜಕ್ಕಸಂದ್ರ ಮತ್ತು ಮರಳವಾಡಿ ಗ್ರಾಮದಲ್ಲಿ ರೇಷನ್‌ ಕಿಟ್‌ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಕುಟುಂಬ ಯಾವಗಲೂ ಬಡವರ ಪರ. ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರು ರೈತರ ಪರವಾಗಿ ರಾಜಕೀಯ ನಡೆಸುತ್ತಾ ಬಂದವರು. ರೈತರಿಗೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಆಯ್ದ ಮುಖಂಡರ ನೆರವಿನೊಂದಿಗೆ ಹಂಚಿಕೆ ಮಾಡಲಾಗುತ್ತಿದೆ. ವಿಶೇಷವಾಗಿ ದಿನಗೂಲಿ ನೌಕರರು, ಕಾರ್ಮಿಕರಿಗೆ ತುಂಬಾ ಕಷ್ಟವಾಗಿದೆ. ಎಲ್ಲರೂ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಸ್ಥಳೀಯ ಮುಖಂಡರ ನೆರವಿನೊಂದಿಗೆ ಆಹಾರ ಕಿಟ್‌ಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ. ಲಾಕ್‌ಡೌನ್‌ ಮುಗಿದ ಬಳಿಕ ತಾಯಿ ಅನಿತಾ ಅವರ ಜತೆಗೂಡಿ ಗ್ರಾಮ ಮಟ್ಟದಲ್ಲಿ ‍ಪ್ರವಾಸ ಕೈಗೊಂಡು ಸ್ಥಳೀಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವುದಾಗಿ ತಿಳಿಸಿದರು.

ಜೆಡಿಎಸ್‌ ರಾಮನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್‌, ಪಕ್ಷದ ಮುಖಂಡರಾದ ಡಿ.ಎಸ್‌.ಭುಜಂಗಯ್ಯ, ರಾಮಕೃಷ್ಣಪ್ಪ, ಈರೇಗೌಡ, ಕೆ.ಎನ್‌.ರಾಮು, ಕೆ.ಎನ್‌.ಲಕ್ಷ್ಮಣ್‌, ಬನ್ನಿಕುಪ್ಪೆ ರಾಜು, ಸಿದ್ದಪ್ಪ, ಮಲ್ಲಯ್ಯ, ತಿಮ್ಮಪ್ಪ, ಸಿದ್ದರಾಜು, ರವಿ, ಕರಿಯಪ್ಪ, ಪ್ರವೀಣ್‌, ಶಿವರಾಜು, ಮಾದೇವ, ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT