ರಾಜಣ್ಣ ಭೇಟಿಯನ್ನು ನಿರಾಕರಿಸಬೇಕೆಂದು ದೇವೇಗೌಡರಿಗೆ ಹೇಳುತ್ತೇನೆ: ಅನಿತಾ
‘ಆತ ದೇವೇಗೌಡರ ಕಾಲಿನ ದೂಳಿಗೆ ಸಮವಲ್ಲದ ವ್ಯಕ್ತಿ. ಆಚಾರವಿಲ್ಲದ ನಾಲಿಗೆ ಪರಮನೀಚ ಮನುಷ್ಯ ರಾಜಣ್ಣ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಷ್ಕರ ನಿರತ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ರಾಜಣ್ಣರ ನೀಚ ಬುದ್ಧಿಯನ್ನ ನೋಡಿಯೇ ಮಧುಗಿರಿ ಜನ ಸೋಲಿಸಿದ್ದಾರೆ. ತಮ್ಮ ಹೇಳಿಕೆ ಕುರಿತು ಕ್ಷಮೆ ಕೋರದೆ ದೇವೇಗೌಡರನ್ನು ಭೇಟಿ ಮಾಡುತ್ತೀನಿ ಎನ್ನುತ್ತಿದ್ದಾರೆ. ಇಂತಹ ನೀಚ ವ್ಯಕ್ತಿಯನ್ನು ಭೇಟಿಯಾಗುವುದೇ ಬೇಡವೆಂದು ನಮ್ಮ ಮಾವನವರಿಗೆ ಹೇಳುತ್ತೇನೆ’ ಎಂದರು.Last Updated 3 ಜುಲೈ 2022, 2:56 IST