ರಾಮನಗರ: ‘ಆತ ದೇವೇಗೌಡರ ಕಾಲಿನ ದೂಳಿಗೆ ಸಮವಲ್ಲದ ವ್ಯಕ್ತಿ. ಆಚಾರವಿಲ್ಲದ ನಾಲಿಗೆ ಪರಮನೀಚ ಮನುಷ್ಯ ರಾಜಣ್ಣ’ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಷ್ಕರ ನಿರತ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ರಾಜಣ್ಣರ ನೀಚ ಬುದ್ಧಿಯನ್ನ ನೋಡಿಯೇ ಮಧುಗಿರಿ ಜನ ಸೋಲಿಸಿದ್ದಾರೆ. ತಮ್ಮ ಹೇಳಿಕೆ ಕುರಿತು ಕ್ಷಮೆ ಕೋರದೆ ದೇವೇಗೌಡರನ್ನು ಭೇಟಿ ಮಾಡುತ್ತೀನಿ ಎನ್ನುತ್ತಿದ್ದಾರೆ. ಇಂತಹ ನೀಚ ವ್ಯಕ್ತಿಯನ್ನು ಭೇಟಿಯಾಗುವುದೇ ಬೇಡವೆಂದು ನಮ್ಮ ಮಾವನವರಿಗೆ ಹೇಳುತ್ತೇನೆ’ ಎಂದರು.

ಪೌರಕಾರ್ಮಿಕರು ಶ್ರಮ ಜೀವಿಗಳಾಗಿದ್ದು ನಿಮ್ಮ ಪರ ನಾನು ಇದ್ದೇನೆ ಎಂದು ಧೈರ್ಯ ಹೇಳಿದ ಶಾಸಕರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.