ಕಲ್ಯಾಣಿಯಿಂದ ಶವ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ

ಶುಕ್ರವಾರ, ಏಪ್ರಿಲ್ 26, 2019
36 °C

ಕಲ್ಯಾಣಿಯಿಂದ ಶವ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ

Published:
Updated:
Prajavani

ಮಾಗಡಿ: ಪಟ್ಟಣದ ತಿರುಮಲೆ ರಸ್ತೆಯ ಬದಿಯ ಕಲ್ಯಾಣಿಗೆ ಭಾನುವಾರ ಸಂಜೆ ಜಾರಿಬಿದ್ದು ಮೃತಪಟ್ಟಿದ್ದ ಕಿರಣ್‌ ಕುಮಾರ್‌ (30) ಶವವನ್ನು ಅಗ್ನಶಾಮಕ ದಳದ ಸಿಬ್ಬಂದಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಹರಸಾಹಸ ಪಟ್ಟು ಹೊರತೆಗೆದರು. 

ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ನೇತೃತ್ವದಲ್ಲಿ ಸೋಮವಾರ ಮುಂಜಾನೆಯಿಂದಲೇ, 5 ಟ್ರ್ಯಾಕ್ಟರ್‌ಗಳಿಗೆ ಜನರೇಟರ್‌ ಬಳಸಿ ಕಲ್ಯಾಣಿಯ ನೀರು ಹೊರಗೆ ಹರಿಸಲಾಯಿತು. ಒಂದು ಗಂಟೆಯ ವೇಳೆಗೆ ಶವ ಪತ್ತೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರ್‌, ಮಾದೇಗೌಡ, ಚವ್ಹಾಣ್‌, ರಮೇಶ್‌ ತಂಡದವರೊಂದಿಗೆ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಹಕರಿಸಿದರು.

ತಹಶೀಲ್ದಾರ್‌ ನರಸಿಂಹಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆಯ ಮುಖ್ಯಾಧಿಕಾರಿ ಅಥವಾ ಜನಪ್ರತಿನಿಧಿಗಳು ಕಲ್ಯಾಣಿಯತ್ತ ಸುಳಿಯಲಿಲ್ಲ. ಸಾವಿರಾರು ಯುವಕರು ಕಲ್ಯಾಣಿಯ ಸುತ್ತ ನೆರೆದಿದ್ದರು.

ದುಃಖ: ಗಂಡನನ್ನು ಕಳೆದುಕೊಂಡಿರುವ ರೂಪ, ತನ್ನೆರಡು ಎಳೆಯ ಮಕ್ಕಳನ್ನು ಎದೆಗೆ ಅವುಚಿಕೊಂಡು ರೋದಿಸುತ್ತಿದ್ದುದು ಮನ ಕಲಕುವಂತಿತ್ತು. ಸ್ವಗ್ರಾಮ ಹಾರೋಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !