ಗುರುವಾರ , ಮಾರ್ಚ್ 30, 2023
22 °C

ಚಿಣ್ಣರಿಗೆ ಹೂವು ನೀಡಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಎರಡು ವರ್ಷಗಳ ನಂತರ ಅಂಗನವಾಡಿ ಕೇಂದ್ರಗಳು ಪುನರಾಂಭಗೊಂಡಿದ್ದು, ಕೇಂದ್ರಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ತಾಲ್ಲೂಕಿನಲ್ಲಿ ಒಟ್ಟು 335 ಅಂಗನವಾಡಿ ಕೇಂದ್ರಗಳಿವೆ. ನ. 8ರಿಂದ ಪ್ರಾರಂಭಿಸುವ ವಿಷಯ ಮೊದಲೇ ತಿಳಿದಿದ್ದರಿಂದ ಸಿಡಿಪಿಒ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಸೇರಿ ಕೇಂದ್ರಗಳಲ್ಲಿ ಮಕ್ಕಳ ಬರುವಿಕೆಗಾಗಿ ಎಲ್ಲಾ ಸಿದ್ಧತೆ ನಡೆಸಿದ್ದರು.

ಕೇಂದ್ರದೊಳಗೆ ಸುಣ್ಣ, ಬಣ್ಣ ಮಾಡಿಸಿ ವಿವಿಧ ಹೂಗಳಿಂದ ಶೃಂಗರಿಸಿ ಕೇಂದ್ರಕ್ಕೆ ಬಂದ ಮಕ್ಕಳಿಗೆ ಚಾಕೋಲೆಟ್‌ ಮತ್ತು ಹೂ ನೀಡಿ ಬರಮಾಡಿಕೊಂಡರು.

ತಾಲ್ಲೂಕಿನಲ್ಲಿ 3 ವರ್ಷ ಮೇಲ್ಪಟ್ಟ ಮತ್ತು 6 ವರ್ಷದೊಳಗಿನ ಒಟ್ಟು 5,535 ಮಕ್ಕಳಿದ್ದು ಮೊದಲನೇ ದಿನವೇ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಕರೆತಂದರು. ಪೋಷಕರು ತಮ್ಮ ಮಕ್ಕಳಿಗೆ ಅಂಗನವಾಡಿ ಪ್ರಾರಂಭವಾಗಿ ಅಲ್ಲಿ ಕಲಿಯುತ್ತಾರೆ ಎಂಬುದೇ ದೊಡ್ಡ ಖುಷಿಯನ್ನು ಕೊಟ್ಟಿದೆ. ಅತ್ಯಂತ ಸಂತೋಷದಿಂದಲೇ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿದರು.

ಎರಡನೇ ಹಂತದ ಕೋವಿಡ್‌ ಲಸಿಕೆ ಪಡೆದಿರುವ ಪೋಷಕರ ಮಕ್ಕಳಿಗೆ ಮಾತ್ರ ಅವಕಾಶ ನೀಡಿದ್ದು ಅದನ್ನು ಕಾರ್ಯಕರ್ತೆಯರು ಪರಿಶೀಲಿಸಿದರು. ಕೇಂದ್ರದಲ್ಲಿ ಮಕ್ಕಳನ್ನು ಅಂತರದಲ್ಲಿ ಕೂರಿಸಿ ಕೋವಿಡ್‌ ಮಾರ್ಗಸೂಚಿ ಪಾಲಿಸಲಾಯಿತು.

‘ಕೋವಿಡ್‌ ಕಾರಣದಿಂದ ಎರಡು ವ‍ರ್ಷದಿಂದ ಅಂಗನವಾಡಿ ಕೇಂದ್ರವನ್ನು ಬಂದ್‌ ಮಾಡಲಾಗಿತ್ತು. ಮಕ್ಕಳ ಕಲಿಕೆಯ ಜತೆಗೆ ಹಾರೈಕೆ ಮತ್ತು ಪಾಲನೆಯು ಅಂಗನವಾಡಿಯಲ್ಲಿ ನಡೆಯುತ್ತಿತ್ತು. ಕೊರೊನಾ ಕಾರಣದಿಂದ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ’ ಎಂದು ಹಿರಿಯ ಮೇಲ್ವಿಚಾರಕಿ ವೀಣಾ ತಿಳಿಸಿದರು.

‘ಸರ್ಕಾರ ಕೋವಿಡ್‌ ಸೋಂಕು ಕಡಿಮೆ ಆಗಿರುವುದರಿಂದ ಮತ್ತೆ ಕೇಂದ್ರವನ್ನು ಪ್ರಾರಂಭಿಸಿದೆ. ಇದು ಪೋಷಕರಿಗೂ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅತ್ಯಂತ ಖುಷಿ ತಂದಿದೆ. ಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುತ್ತಿದೆ. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಲಾಯಿತು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.