ಮಂಗಳವಾರ, ನವೆಂಬರ್ 12, 2019
20 °C

ಉಚಿತ ನೋಟ್‌ ಪುಸ್ತಕ ವಿತರಣೆ

Published:
Updated:
Prajavani

ಕುದೂರು(ಮಾಗಡಿ): ವಿದ್ಯಾವಂತರಾಗಿ ನಗರದಲ್ಲಿ ನೆಲೆಸಿರುವ ಉದ್ಯೋಗಸ್ಥರು, ಗ್ರಾಮೀಣ ಭಾಗದ ಬಡವರತ್ತ ಸಹಾಯಹಸ್ತ ಚಾಚಬೇಕು ಎಂದು ಮುಖ್ಯಶಿಕ್ಷಕರ ರೇವಣಸಿದ್ದಯ್ಯ ತಿಳಿಸಿದರು.

ಮಹಾಂತೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಸಿರಿವಂತರು ಮತ್ತು ಬಡವರ ನಡುವೆ ಅಂತರ ಹೆಚ್ಚುತ್ತಲೇ ಇದೆ. ಗ್ರಾಮರಾಜ್ಯದ ಕನಸು ನನಸಾಗಿಲ್ಲ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ಗಾಂಧೀಜಿ ಕಂಡ ಕನಸು ನನಸಾಗಿಲ್ಲ. ಶಿಕ್ಷಣದಿಂದ ಮಾತ್ರ ಸಮಾಜಕ್ಕೆ ಅಂಟಿರುವ ಅಸ್ಪೃಶ್ಯತೆ, ಜಾತೀಯತೆ ಮೌಡ್ಯತೆ ಇತರೆ ಪಿಡುಗುಗಳನ್ನು ತೊಲಗಿಸಲು ಸಾಧ್ಯ ಎಂದರು.

‘ದುಡಿದು ಗಳಿಸಿದ್ದರಲ್ಲಿ ಸ್ವಲ್ಪಭಾಗವನ್ನು ದೀನರಿಗೆ ನೀಡುವುದರಿಂದ ದೇವರು ಮೆಚ್ಚುತ್ತಾನೆ. ಬಡ ಮಕ್ಕಳ ಬಾಳಿಗೆ ನೀವು ನೀಡುವ ಸಹಾಯ ದಾರಿದೀಪವಾಗುತ್ತದೆ’ ಎಂದರು.

ಶಿಕ್ಷಕ ರಮೇಶ್, ಹಳೆಯ ವಿದ್ಯಾರ್ಥಿಗಳಾದ ರಜನಿ, ವೇದಮೂರ್ತಿ, ಯೋಗೀಶ್ ಬಾಬು, ಬೈರವೇಶ್ವರ, ಅಭಿಷೇಕ್, ಶಿವಕುಮಾರ್, ವಾಸು ಚೈತ್ರ ಇದ್ದರು. ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)