ಶನಿವಾರ, ಸೆಪ್ಟೆಂಬರ್ 18, 2021
21 °C

ಶೌಚಾಲಯ ಕಿಟ್ ನೀಡಿ ಜನ್ಮದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸ್ವಚ್ಛ ಭಾರತ್ ಮಿಷನ್‍ಗೆ ಪೂರಕವಾಗಿ ಗಾಂಧಿನಗರದ ಬಡವರಿಗೆ ಶೌಚಾಲಯ ಕಿಟ್‍ ವಿತರಣೆ ಮಾಡಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವರದರಾಜುಗೌಡ ಅವರು ಭಾನುವಾರ ಜನ್ಮದಿನ ಆಚರಿಸಿದರು.

ಬಳಿಕ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ನನ್ನ ಕೈಲಾದ ಅಳಿಲು ಸೇವೆ ಮಾಡುವ ಹಂಬಲ ನನಗಿದೆ. ಹಾಗಾಗಿ ಈ ಹೊಸ ಚಿಂತನೆ ನನ್ನಲ್ಲಿ ಬಂದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಿಟ್ ವಿತರಣೆ ಮಾಡುತ್ತಿದ್ದೇನೆ’ ಎಂದರು.

‘200ಕ್ಕೂ ಹೆಚ್ಚು ಕುಟುಂಬಗಳಿಗೆ ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡುವ ಎರಡು ಬುಟ್ಟಿ ಮತ್ತು ಶೌಚಾಲಯ ಬಳಕೆ ಮತ್ತು ಶುದ್ಧೀಕರಣಕ್ಕೆ ಅಗತ್ಯವಾದ ವಸ್ತುಗಳನ್ನು ಒಳಗೊಂಡ ಕಿಟ್‍ ಅನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ’ ಎಂದರು.

ವರದರಾಜುಗೌಡ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಪದಾಧಿಕಾರಿಗಳಾದ ಕಿರಣ್ ಹಳ್ಳಿಮಾಳ, ನಾಗಣ್ಣ, ಮುರುಳೀಧರ್, ಸುಧಾಕರ್, ಜೀವನ್, ಕುಮಾರ್, ಅನಿಲ್, ಭೂಪತಿ, ದಿನ್ನ, ಪ್ರಸನ್ನ, ವಿನಯ್, ವಕೀಲ ವಿನೋದ್ ಭಗತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.