‘ಸುರೇಶ್‌ಗೆ ಲೂಟಿ ಹೊಡೆಯುವ ಚಪಲ’
‘ನಮ್ಮ ನಾಯಕ ಕುಮಾರಸ್ವಾಮಿ ಅವರಿಗೆ ಜನಸೇವೆ ಮಾಡುವ ಚಪಲ ಇದೆಯೇ ಹೊರತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಂತೆ ಕಂಡ ಕಂಡವರ ಆಸ್ತಿ ಲೂಟಿ ಹೊಡೆಯುವ ಚಪಲವಿಲ್ಲ. ಅದಕ್ಕಾಗಿಯೇ ತಂಡ ಇಟ್ಟುಕೊಂಡಿಲ್ಲ. ದೆಹಲಿಯಲ್ಲಿದ್ದರೂ ಕುಮಾರಸ್ವಾಮಿ ಅವರು ರಾಜ್ಯದ ಜನರ ಪರ ಕೆಲಸ ಮಾಡುತ್ತಾರೆ. ಅವರ ಬಳಿಗೆ ಹೋದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಜನ ಈಗಲೂ ಅವರ ಬಳಿಗೆ ಬರುತ್ತಾರೆ. ಇದು ಅವರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ’ ಎಂದು ಎಚ್‌ಡಿಕೆ ವಿರುದ್ದದ ಸುರೇಶ್ ಟೀಕೆಗೆ ಎ. ಮಂಜುನಾಥ್ ತಿರುಗೇಟು ನೀಡಿದರು.