ಮಂಗಳವಾರ, ಮೇ 26, 2020
27 °C

ವ್ಯಕ್ತಿಯ ಜೀವಂತ ದಹನ: ಸಾಲ ಪಡೆದವರಿಂದ ಕೃತ್ಯ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ವ್ಯಕ್ತಿಯೊಬ್ಬನಿಗೆ ಜೀವಂತವಾಗಿ ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಕಸಬಾ ಹೋಬಳಿ ಕೂನೂರು ಗ್ರಾಮದ ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಕೂನೂರು ಗ್ರಾಮದ ದಿವಂಗತ ವೀರಭದ್ರಯ್ಯ ಅವರ ಮಗ ಕುಮಾರಸ್ವಾಮಿ (52) ಎಂದು ಗುರುತಿಸಲಾಗಿದೆ. ಇವರು ಸುಮಾರು 20 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ಅಲ್ಲಿ ರೇಷ್ಮೆ ವ್ಯಾಪಾರ ಮಾಡಿಕೊಂಡು ಯಲಹಂಕದಲ್ಲಿ ನೆಲೆಸಿದ್ದರು.

ಇವರಿಗೆ ಪತ್ನಿ ವೀಣಾ ಮತ್ತು ಮಗಳು ಶ್ರೇಯ ಇದ್ದಾರೆ.

‘ಗುರುವಾರ ಬೆಳಿಗ್ಗೆ ತನಗೆ ಯಾರೋ ಹಣ ಕೊಡಬೇಕಿದ್ದು, ಅವರಿಂದ ಹಣವನ್ನು ಪಡೆದು ಬರುವುದಾಗಿ ಮನೆ ಯಿಂದ ಹೊರಟವರು ಗುರುವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮಗಳು ಶ್ರೇಯಾಗೆ ದೂರವಾಣಿ ಕರೆ ಮಾಡಿ ನನಗೆ ಜೀವಂತವಾಗಿ ಬೆಂಕಿ ಹಚ್ಚಿದ್ದಾರೆ’ ಎಂದು ಹೇಳಿದ್ದಾಗಿ ಪತ್ನಿ ತಿಳಿಸಿದರು.

‘ಕೂಡಲೆ ಮಗಳು ಕುಮಾರಸ್ವಾಮಿ ಸಹೋದರರು ಹಾಗೂ ತಾತನ ಮನೆಯ ವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರು ಘಟನಾ ಸ್ಥಳಕ್ಕೆ ಹೋಗಿ ಬೆಂಕಿಯಿಂದ ರಕ್ಷಣೆ ಮಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ’ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು