ಮಂಗಳವಾರ, ನವೆಂಬರ್ 24, 2020
22 °C

ಮಾಗಡಿ: ಭೈರವನ ದುರ್ಗದ ಸ್ಮಾರಕ ಸಂರಕ್ಷಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುದೂರು(ಮಾಗಡಿ): ‘ಭೈರವನ ದುರ್ಗದ ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ ಆಗ್ರಹಿಸಿದರು.

ವರನಟ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದಿಂದ ಭೈರವನ ದುರ್ಗದ ಮೇಲೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 65 ಅಡಿ ಎತ್ತರದ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದುರ್ಗದ ತುತ್ತತುದಿಯಲ್ಲಿ ಕನ್ನಡ ಬಾವುಟ ಹಾರಾಡುವುದನ್ನು ನೋಡಿದರೆ ನಾಡಿನ ಗತವೈಭವಗಳು ನೆನಪಾಗುತ್ತವೆ. ವಿಜಯನಗರ ಸಾಮ್ರಾಜ್ಯದ ಗಡಿಯಾಗಿದ್ದ ಮಾಗಡಿ ತಾಲ್ಲೂಕಿನಲ್ಲಿ ಭೈರವನ ದುರ್ಗವು ಸ್ಥಳೀಯ ಪಾಳೇಗಾರರು, ಧರ್ಮಪ್ರಭು ಕೆಂಪೇಗೌಡ, ಟಿಪ್ಪುಸುಲ್ತಾನ್‌ ಆಳ್ವಿಕೆಯ ಕಾಲದಲ್ಲಿ ಉತ್ತುಂಗದಲ್ಲಿತ್ತು ಎಂಬುದು ಇತಿಹಾಸದ ದಾಖಲೆಗಳಿಂದ
ತಿಳಿದುಬರುತ್ತದೆ ಎಂದರು.

ಭೈರವನ ದುರ್ಗದ ಸುತ್ತಲಿನ ಭೂಮಿಯನ್ನು ಖಾಸಗಿ ವ್ಯಕ್ತಿಗಳು ವಶಪಡಿಸಿಕೊಂಡಿ
ದ್ದಾರೆ. ಜೆಸಿಬಿ ಬಳಸಿ ದುರ್ಗದಲ್ಲಿನ ಸ್ಮಾರಕಗಳು, ಕಲ್ಯಾಣಿಯನ್ನು ನಾಶ ಮಾಡುತ್ತಿರುವುದು ಶೋಚನೀಯ. ಭೈರವನ ದುರ್ಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ತಲಸ್ಪರ್ಶಿ ಅಧ್ಯಯನ ನಡೆಸಬೇಕು. ದುರ್ಗದ ಐತಿಹ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು
ಆಗ್ರಹಿಸಿದರು.

ಕುದೂರು ಭೈರವನ ದುರ್ಗದ ಮೇಲಿರುವ ಕೋಟೆ ಆಂಜನೇಯಸ್ವಾಮಿಗೆ ಶನಿವಾರ ವರನಟ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು, ಗ್ರಾಮಸ್ಥರು ಅಭಿಮಾನಿಗಳು ಕನ್ನಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

‘ನವೆಂಬರ್‌ ಅಂತ್ಯದವರೆಗೆ ಭೈರವನ ದುರ್ಗದ ಮೇಲೆ 65 ಅಡಿ ಎತ್ತರದ ಕನ್ನಡ ಬಾವುಟ ಹಾರಾಡಲಿದೆ. ಬಾವುಟದ ಹಾರಾಟವು ಮರೂರು, ಸೋಲೂರು, ತಿಪ್ಪಸಂದ್ರ, ಸುಗ್ಗನಹಳ್ಳಿ, ಶಿವಗಂಗೆವರೆಗೂ ಗೋಚರವಾಗುತ್ತಿದೆ. ಈ ದೃಶ್ಯ ನೋಡಲು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಪ್ರತಿವರ್ಷ ಚಾರಣಿಗರು, ಕನ್ನಡದ ಅಭಿಮಾನಿಗಳು ಆಗಮಿಸಲಿ
ದ್ದಾರೆ’ ಎಂದು ಬಳಗದ ಅಧ್ಯಕ್ಷ ಕೆ.ಎಚ್. ನಾಗೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಎಚ್. ಸುರೇಶ್, ಕರ್ನಾಟಕ ರಕ್ಷಣಾ ಪಡೆಯ ರಾಜ್ಯ ಘಟಕದ ಅಧ್ಯಕ್ಷ ಶ್ರೀಧರ್, ಭೈರವನ ದುರ್ಗ ಸಂರಕ್ಷಣಾ ಸಮಿತಿ ಮುಖಂಡ ಕೆ.ಆರ್. ಯತಿರಾಜು, ಹನುಮಂತಪ್ಪ, ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ಸದಸ್ಯರಾದ ಸಿದ್ದರಾಜು, ಸುರೇಶ್, ಜಗದೀಶ್, ಕೆಂಪಾಚಾರಿ, ಲೇಖಕ ಆರ್‌. ಮಹೇಶ್‌, ಗೌಡರಪಾಳ್ಯದ ಗಂಗಾಧರ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.