ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ರಕ್ತದ ಕೊರತೆ

ಸರ್ಕಾರಿ ಆಸ್ಪತ್ರೆಗಳಲ್ಲಿನ ಸಂಗ್ರಹ ಕೇಂದ್ರಗಳು ಖಾಲಿಖಾಲಿ
Last Updated 5 ಮೇ 2020, 17:07 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿನ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಇದ್ದು, ತುರ್ತು ಸಂದರ್ಭಗಳಲ್ಲಿ ಬೆಂಗಳೂರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಸ್ಪತ್ರೆ ಹಾಗೂ ಉಳಿದ ಮೂರು ತಾಲ್ಲೂಕು ಕೇಂದ್ರಗಳಲ್ಲಿ ರಕ್ತ ಸಂಗ್ರಹ ಕೇಂದ್ರಗಳಿವೆ. ಆದರೆ, ಇಲ್ಲಿ ದಾನಿಗಳಿಂದ ರಕ್ತ ಪಡೆಯುವ ಸೌಲಭ್ಯವಿಲ್ಲ. ಕನಕಪುರ ಆಸ್ಪತ್ರೆಯಲ್ಲಿ ಕೆಲವು ಯೂನಿಟ್‌ನಷ್ಟು ರಕ್ತ ಬಿಟ್ಟರೆ ಉಳಿದ ಮೂರು ಕೇಂದ್ರಗಳಲ್ಲೂ ಹನಿ ರಕ್ತವೂ ಇಲ್ಲ. ಹೀಗಾಗಿ ಬೆಂಗಳೂರಿನಿಂದ ಸದ್ಯ ರಕ್ತದ ಯೂನಿಟ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಎರಡು ಖಾಸಗಿ ರಕ್ತನಿಧಿ ಕೇಂದ್ರಗಳು ಇವೆ. ಇಲ್ಲಿ ಪ್ರತಿ ಯೂನಿಟ್‌ ರಕ್ತಕ್ಕೆ ಬಿಪಿಎಲ್‌ ಕಾರ್ಡುದಾರರಿಗೆ ₹725 ಹಾಗೂ ಇತರೆ ವರ್ಗದವರಿಗೆ ₹1450 ಶುಲ್ಕ ಮಾತ್ರ ಪಡೆದು ರಕ್ತ ನೀಡಬೇಕು ಎಂಬ ನಿಯಮವಿದೆ. ಆದರೆ, ಗ್ರಾಹಕರಿಂದ ಹೆಚ್ಚಿನ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳೂ ಇವೆ. ಖಾಸಗಿ ರಕ್ತನಿಧಿ ಕೇಂದ್ರಗಳು ತಾವು ಶಿಬಿರಗಳ ಮೂಲಕ ಸಂಗ್ರಹಿಸುವ ರಕ್ತದಲ್ಲಿ ಶೇ 25ರಷ್ಟನ್ನು ಸರ್ಕಾರಿ ಕೇಂದ್ರಗಳಿಗೆ ಸಲ್ಲಿಸಬೇಕಿದೆ. ಆದರೆ, ಜಿಲ್ಲೆಯಲ್ಲಿನ ಕೇಂದ್ರಗಳು ಸಾಕಷ್ಟು ಯೂನಿಟ್ ರಕ್ತವನ್ನು ಬಾಕಿ ಉಳಿಸಿಕೊಂಡಿವೆ ಎನ್ನಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ.

ರಾಜ್ಯದ ರಕ್ತನಿಧಿಗಳಲ್ಲಿ ರಕ್ತದ ಸಂಗ್ರಹಣೆ ಹೆಚ್ಚಿಸುವಂತೆ ಸರ್ಕಾರ ಈಚೆಗೆ ಆದೇಶ ಹೊರಡಿಸಿತ್ತು. ಜಿಲ್ಲಾಡಳಿತಗಳೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಿತ್ತು. ಜಿಲ್ಲೆಯಲ್ಲಿ ಈವರೆಗೆ ಅಂತಹ ಶಿಬಿರಗಳು ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT