ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಲೋಕ ಅದಾಲತ್: 1.50 ಲಕ್ಷ ಪ್ರಕರಣ ಇತ್ಯರ್ಥ

₹200 ಕೋಟಿ ವಸೂಲು
Published : 25 ಸೆಪ್ಟೆಂಬರ್ 2024, 15:43 IST
Last Updated : 25 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ರಾಮನಗರ: ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ನ್ಯಾಯಾಲಯ ಸೇರಿದಂತೆ ಒಟ್ಟು 19 ಪೀಠಗಳಲ್ಲಿ ಈಚೆಗೆ ಮುಕ್ತಾಯವಾದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,49,485 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. 

ವಿಚಾರಣೆಗೆ ಬಾಕಿ ಇರುವ 54 ಸಾವಿರ ಪ್ರಕರಣಗಳಲ್ಲಿ 3,026 ಪ್ರಕರಣ ಹಾಗೂ 1,46,459 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥ ಪಡಿಸಲಾಗಿದ್ದು, ಒಟ್ಟು ₹202 ಕೋಟಿ ವಸೂಲಿ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಲೋಕ ಅದಾಲತ್ ಪ್ರಕಟಣೆ ತಿಳಿಸಿದೆ. 

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾದ ಪ್ರಕರಣಗಳ ವಿಚಾರಣೆ ನಡೆಸಲಾಯಿತು.    

ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಡಿ. ಮಹವರ್ಕರ್ ನೇತೃತ್ವದಲ್ಲಿ ಹಲವಾರು ನ್ಯಾಯಾಧೀಶರು, ವಕೀಲರು ಅದಾಲತ್‌ನಲ್ಲಿ ಭಾಗವಹಿಸಿದ್ದರು. 

36 ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, 67 ನೆಗೋಷಬಲ್ ಇನ್‌ಸ್ಟ್ರುಮೆಂಟ್‌ ಕಾಯ್ದೆ (ಎನ್ಐ ಆಕ್ಟ್) ಪ್ರಕರಣ, 17 ಸಾಲ ವಸೂಲಾತಿ ಪ್ರಕರಣ, 67 ಮೋಟಾರು ವಾಹನ ಅಪಘಾತ ಪ್ರಕರಣ, 10 ಕಾರ್ಮಿಕ ವಿವಾದ ಪ್ರಕರಣ ಹಾಗೂ ಏಳು ಗಣಿ ಮತ್ತು ಭೂ ವಿಜ್ಞಾನ ಪ್ರಕರಣ ಇತ್ಯರ್ಥಪಡಿಸಲಾಯಿತು.

ಎರಡು ವೈವಾಹಿಕ ಪ್ರಕರಣ,51 ಆಸ್ತಿ ಭಾಗ ಪ್ರಕರಣ, ಒಂದು ಅಂತಿಮ ಡಿಕ್ರಿ ಕಾರ್ಯಾಚರಣೆ ಪ್ರಕರಣ, 15ಜಾರಿ ಪ್ರಕರಣ, 38 ಹಕ್ಕು ಘೋಷಣೆ, 95 ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ.

2,541ಲಘು ವ್ಯಾಜ್ಯ ಪ್ರಕರಣ, ಏಳು ಇತರೆ ಕ್ರಿಮಿನಲ್ ಪ್ರಕರಣ,13 ಬ್ಯಾಂಕ್ ಮೊಕದ್ದಮೆ, 125 ಸಿಆರ್‌ಪಿಸಿ ಪ್ರಕರಣಕ್ಕೆ ಸಂಬಂಧಿಸಿದ 3 ಪ್ರಕರಣ, 1,46,9,459 ಪೂರ್ವ ದಾವೆ (ಪ್ರೀ ಲಿಟಿಗೇಷನ್) ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT