ಮಾಗಡಿ: ರೋಗಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗುವವನೇ ನಿಜವಾದ ರಕ್ಷಕ ಎಂದು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಫಾರೂಕ್ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ರಾಷ್ಟ್ರೀಯ ವೈದ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿದಾಗ ಹೆಚ್ಚಿನ ರೋಗಿಗಳಿಗೆ ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲಾ ಚಿಕಿತ್ಸೆ ಕೊಡಿಸಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತಾಗ ಮಾತ್ರ ಅಮೂಲ್ಯವಾದ ಪ್ರಾಣ ಉಳಿಸಲು ಸಾಧ್ಯ ಎಂದು ತಿಳಿಸಿದರು.

ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಡಾ.ಮಂಜುನಾಥ್ ಬೆಟಗೇರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವಘಡದ ಪರಿಸ್ಥಿತಿಗಳಲ್ಲಿ ಕಡಿಮೆ ಮೂಲಸೌಕರ್ಯದಲ್ಲೂ ಶ್ರದ್ಧೆಯಿಂದ ಸೇವೆ ನೀಡುತ್ತಿದ್ದಾರೆ ಎಂದರು.

ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಚ್.ಯಶ್ವಂತ್, ಡಾ.ಪಿ.ಬಿ.ಮೊಹಮ್ಮದ್ ಫಾರೂಕ್ ಮತ್ತು ಡಾ.ಮಂಜುಳಾ ಅವರನ್ನು ಸನ್ಮಾನಿಸಿ, ಸ್ಮರಣಿಕೆ ನೀಡಲಾಯಿತು.

ರೋಟರಿ ಕಾರ್ಯದರ್ಶಿ ವಿನೋದ್, ಲೋಕೇಶ್, ಮಲ್ಲಿನಾಥ್, ಲ್ಯಾಬ್ ಲೋಕೇಶ್, ಪ್ರಭಾಕರ್ ಎಲ್, ನಾಗೇಶ್, ಶಂಕರ, ಕುಮಾರ್, ಗಂಗರಾಜು, ಎಲ್.ಎನ್.ಆರ್.ಮೂರ್ತಿ, ವೇಣು, ಸುಲ್ತಾನ್ ಬಾಬ, ಗಣೇಶ್, ದಕ್ಷಿಣಮೂರ್ತಿ, ರೂಪ್ ಲಾಲ್, ಉಮೇಶ್, ಮನು ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.