ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ಗಿ ಸಂಭ್ರಮ | ಧಾನ್ಯದ ರಾಶಿಗೆ ಪೂಜೆ: ಕಬ್ಬಿನ ಜಲ್ಲೆಗಳ ಸಿಂಗಾರ

Published 15 ಜನವರಿ 2024, 7:29 IST
Last Updated 15 ಜನವರಿ 2024, 7:29 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ತಗಚಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಮಕರ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಸಾಂಪ್ರದಾಯಿಕ ಉಡುಪು ತೊಟ್ಟ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿ, ಎಳ್ಳು- ಬೆಲ್ಲ ವಿತರಿಸಿದರು. ವಿದ್ಯಾರ್ಥಿನಿಯರು, ಶಿಕ್ಷಕರು ಸುಗ್ಗಿ ನೃತ್ಯ ಮಾಡಿದರು.

ಶಾಲೆಯ ಅಂಗಳವನ್ನು ರಂಗೋಲಿ, ಮಣ್ಣಿನ ಮಡಿಕೆ, ಕಬ್ಬಿನ ಜಲ್ಲೆಗಳಿಂದ ಸಿಂಗರಿಸಲಾಗಿತ್ತು. ದವಸಧಾನ್ಯ ರಾಶಿ ಹಾಕಿ ಪೂಜೆ ಸಲ್ಲಿಸಲಾಯಿತು. ಹಸುಗಳನ್ನು ಕಿಚ್ಚು ಹಾಯಿಸಲಾಯಿತು. ವಿವಿಧ ಬಗೆಯ ಖಾದ್ಯಗಳನ್ನು ಸವಿದರು.

ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವರ್ಷವಿಡೀ ದುಡಿದ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ  ಸುಗ್ಗಿ ಹಬ್ಬ ಸಂಕ್ರಾಂತಿ.  

ಶಾಲೆಯ ಮುಖ್ಯಶಿಕ್ಷಕಿ ಮಂಗಳ, ಶಾಲಾ ಮಕ್ಕಳಿಗೆ ಭಾರತೀಯ ಹಬ್ಬಗಳ ತಿಳಿವಳಿಕೆ ನೀಡುವ ಉದ್ದೇಶದಿಂದ ಶಾಲೆಯಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದರು.

ಶಿಕ್ಷಣ ಸಂಯೋಜಕಿ ರಾಜಲಕ್ಷ್ಮಿ, ಸಂಪನ್ಮೂಲ ವ್ಯಕ್ತಿ ನಾರಾಯಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಗಳ, ಶಿಕ್ಷಕರಾದ ಆನಂದ್, ಜಯರಾಮ್, ಸುರೇಶ್, ಚೈತ್ರ, ಲಕ್ಕಪ್ಪ, ಶಿವಣ್ಣ, ಶಿವಕುಮಾರ್, ಪ್ರಫುಲ್ ಕುಮಾರ್, ಸ್ವಾಮಿ, ರವೀಂದ್ರ, ಪ್ರಮೀಳಮ್ಮ, ಇಂದ್ರ, ರೂಪ, ಎಲೆಕೇರಿ ರಾಜಶೇಖರ್, ಕೃಷ್ಣೇಗೌಡ, ಲಾಳಘಟ್ಟ ರಾಜಶೇಖರ್,  ಎಂ.ಎನ್. ರಾಜು, ಪ್ರತಿಮಾ, ಭಾಗ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT