ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ಸಂಕ್ರಾಂತಿ: ಕಡಲೆಕಾಯಿ ಪರಿಷೆ ಆಯೋಜನೆ

Published 16 ಜನವರಿ 2024, 5:59 IST
Last Updated 16 ಜನವರಿ 2024, 5:59 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಡ್ಯೂಮ್‌ ಲೈಟ್‌ ಸರ್ಕಲ್‌ ಡಾ.ಶಿವಕುಮಾರಸ್ವಾಮೀಜಿ ಗೆಳೆಯರ ಬಳಗ ಮತ್ತು ಅನ್ನದಾಸೋಹ ಸಮಿತಿ ಸಹಯೋಗದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ರಾತ್ರಿ ಅರಳಿಕಟ್ಟೆ ಪೂಜೆ ಮತ್ತು ಹಸುಪೂಜೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಿತು.

ರಾಗಿರಾಶಿ, ದವಸಧಾನ್ಯಗಳ ರಾಸಿಗಳಿಗೆ ಪೂಜೆ ಸಲ್ಲಿಸಲಾಯಿತು. ಗೆಳೆಯರ ಬಳಗ ವಿತರಿಸಿದ ಕಡಲೆಕಾಯಿ ಜೊತೆ ಕಬ್ಬು ಪಡೆಯಲು ಸಾವಿರಾರು ಜನರು ಜಮಾಯಿಸಿದ್ದರು. 

ಕಡಲೆ ಕಾಯಿ ಪರಿಶೆ ಆಯೋಜಿಸಿದ್ದ ವಿಜಯಕುಮಾರ್‌ ಮಾತನಾಡಿ, ‘ಮಕ್ಕಳಿಗೆ ಪರಿಷೆ ಕಲ್ಪನೆ ಕಾಣೆಯಾಗುತ್ತಿದೆ. ಮಕ್ಕಳಿಗೆ ಜನಪದ ಜಾತ್ರೆಯ ನೆನಪು ಮೂಡಿಸಲು 500 ಸೇರು ಕಡಲೆ ಕಾಯಿ ಸಂಗ್ರಹಿಸಿದ್ದೇವೆ’ ಎಂದರು.

ಪುರಸಭೆ ಸದಸ್ಯ ಅರುಣ್‌ಕುಮಾರ್‌, ಶಿವರುದ್ರಮ್ಮ, ಮಹೇಶ್‌, ರವಿಶಂಕರ್‌, ಮಹಂತೇಶ್‌, ಗಣೇಶ್‌,ಹೇಮಂತ್‌ಕುಮಾರ್‌, ಅಕ್ಕಮಹಾದೇವಿ ಬಳಗ, ವೀರಶೈವ ವಿನಾಯಕ ಯುವಕರ ಬಳಗ ಹಾಗೂ ಡ್ಯೂಮ್‌ ಲೈಟ್‌ ವ್ಯಾಪಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT