ಹಾರೋಹಳ್ಳಿ: ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಯ್ಯಲಪ್ಪನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ನೊಂದ ವೃದ್ಧರೊಬ್ಬರು ಭಾನುವಾರ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಮರಳವಾಡಿ ಬಳಿಯ ಉಯ್ಯಲಪ್ಪನಹಳ್ಳಿ ಗ್ರಾಮದ ಚಿಕ್ಕ ತಾಯಮ್ಮ(60) ಕೊಲೆಯಾದ ವೃದ್ಧೆ. ಅವರ ಪತಿ ದಾಸೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿದಿನ ಚಿಕ್ಕ ತಾಯಮ್ಮ ಮತ್ತು ದಾಸೇಗೌಡ ಜಗಳವಾಡುತ್ತಿದ್ದರು. ಭಾನುವಾರ ತಡರಾತ್ರಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ದಾಸೇಗೌಡ ಅವರು ಚಿಕ್ಕ ತಾಯಮ್ಮ ಅವರ ಕತ್ತು ಹಿಸುಕಿದ್ದಾರೆ.

ಸ್ಥಳಕ್ಕೆ ಬಂದ ಹಾರೋಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.