ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮಾವು ಬೆಳೆ ನಷ್ಟ | ಬೆಂಬಲ ಬೆಲೆಗೆ ಕ್ರಮ: ಬಿ.ಸಿ.ಮುದ್ದು ಗಂಗಾಧರ್ ಭರವಸೆ

Published : 4 ಜನವರಿ 2026, 6:00 IST
Last Updated : 4 ಜನವರಿ 2026, 6:00 IST
ಫಾಲೋ ಮಾಡಿ
Comments
ತರಬೇತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರರು
ತರಬೇತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾವು ಬೆಳೆಗಾರರು
ಮಾವು ಕೊಯ್ಲು ಮತ್ತು ಮಾರಾಟಕ್ಕೆ ಪೂರಕವಾಗಿ ಕ್ರೇಟ್ ಮತ್ತು ಕಾರ್ಟ್‌ನ್ ಬಾಕ್ಸ್‌ ಉಚಿತವಾಗಿ ನೀಡಲು ಕ್ರಮ ವಹಿಸಲಾಗಿದೆ. ಬೆಳೆಗೆ ಔಷಧ ಸಿಂಪಡಣೆಗೆ ರೈತರಿಗೆ ನೆರವಾಗಲು ₹2 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ
– ಡಾ. ಬಿ.ಸಿ. ಮುದ್ದು ಗಂಗಾಧರ್ ಅಧ್ಯಕ್ಷ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
‘ಸಂಸ್ಕರಣಾ ಘಟಕ ಶೀಘ್ರ ಸೇವೆಗೆ ಮುಕ್ತ’
‘ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಬಳಿ ನಿರ್ಮಿಸಿರುವ ಮಾವು ಸಂಸ್ಕರಣಾ ಘಟಕದ ಕಾಮಗಾರಿ ಶೇ 99ರಷ್ಟು ಪೂರ್ಣಗೊಂಡಿದೆ. ಕೋಲ್ಡ್ ಸ್ಟೋರೇಜ್‌ಗೆ ಅಂತಿಮ ಹಂತದಲ್ಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆದು ತಿಂಗಳೊಳಗೆ ಘಟಕವನ್ನು ಸೇವೆಗೆ ಮುಕ್ತಗೊಳಿಸಲಾಗುವು’ ಎಂದು ಮಾವು ನಿಮಗದ ಅಧ್ಯಕ್ಷ ಮುದ್ದು ಗಂಗಾಧರ್ ತಿಳಿಸಿದರು.
‘ಹೆಕ್ಟೇರ್‌ಗೆ ₹45 ಸಾವಿರ ಪರಿಹಾರ ಕೊಡಿಸಿ’
‘ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಮಾವು ಬೆಳೆಗಾರರಿಗೆ ₹447 ಕೋಟಿ ನಷ್ಟವಾಗಿದೆ. ಸರ್ಕಾರ ಬೆಳೆ ನಷ್ಟಕ್ಕೆ ನಿಗದಿಪಡಿಸಿರುವ ಪರಿಹಾರ ಮೊತ್ತ ಕಡಿಮೆಯಾಗಿದೆ. ಹಾಗಾಗಿ ಪ್ರತಿ ಹೆಕ್ಟೇರ್‌ಗೆ ₹45 ಸಾವಿರ ಪರಿಹಾರ ನಿಗದಿಪಡಿಸಬೇಕು. ಮಾರುಕಟ್ಟೆಗೆ ಮೊದಲೇ ಪ್ರವೇಶಿಸುವ ರಾಮನಗರ ಮಾವಿನ ಮಾರಾಟಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಹೆಚ್ಚು ಮಾವು ಮೇಳ ಆಯೋಜಿಸಬೇಕು’ ಎಂದು ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಧರಣೀಶ್ ಕುಮಾರ್ ಅವರು ಮಾವು ನಿಗಮದ ಅಧ್ಯಕ್ಷರಿಗೆ ಮನವಿ ಮಾಡಿದರು.
‘ವಿವೇಚನೆ ಬಳಸಿ ಔಷಧ ಸಿಂಪಡಿಸಿ’
‘ಬೆಳೆಗಾರರು ಔಷಧ ಸಿಂಪಡಿಸುವಾಗ ವಿವೇಚನೆ ಬಳಸದಿರುವುದು ವಿವಿಧ ತೊಂದರೆಗಳಿಗೆ ಕಾರಣವಾಗುತ್ತಿದೆ. ಶೇ 70ರಷ್ಟು ರೈತರು ಹೂ ಬಿಟ್ಟ ಕಾರಣಕ್ಕೆ ಮತ್ತು ಶೇ 30ರಷ್ಟು ಮಂದಿ ಕೀಟ ಬಂದಿರುವ ಕಾರಣಕ್ಕೆ ಔಷಧ ಸಿಂಪಡಿಸುತ್ತಿದ್ದಾರೆ. ಔಷಧ ಯಾವಾಗ ಸಿಂಪಡಿಸಬೇಕು ಹಾಗೂ ದಿನಗಳ ಅಂತರ ಎಷ್ಟಿರಬೇಕು ಎಂಬುದರ ಅರಿವು ಮುಖ್ಯ. ಕನಿಷ್ಠ 10-12 ದಿನಗಳ ಅಂತರದಲ್ಲಿ ಮತ್ತೊಮ್ಮೆ ಔಷಧ ಸಿಂಪಡಣೆ ಮಾಡಬಹುದಾಗಿದೆ. ವೈಜ್ಞಾನಿಕವಾಗಿ ಮಾವಿನ ಋತು ಶುರುವಾದಾಗ ಮೂರು ಸಲ ಮಾತ್ರ ಔಷಧ ಸಿಂಪಡಿಸಬೇಕು’ ಎಂದು ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಾಜೇಂದ್ರ ಪ್ರಸಾದ್ ಬಿ.ಎಸ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT