ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲಿ 22 ರಂದು ಮ್ಯಾರಥಾನ್‌

Last Updated 18 ಡಿಸೆಂಬರ್ 2019, 13:48 IST
ಅಕ್ಷರ ಗಾತ್ರ

ಕನಕಪುರ: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಫಿಟ್‌ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಡಿ. 22 ರಂದು ದೇಗುಲ ಮಠದ ಶಿಕ್ಷಣ ಸಂಸ್ಥೆ ಎಸ್‌ಎನ್‌ ಪಬ್ಲಿಕ್‌ ಶಾಲೆ ವತಿಯಿಂದ ಮ್ಯಾರಥಾನ್‌ ಹಮ್ಮಿಕೊಂಡಿರುವುದಾಗಿ ಮಠದ ಮುಮ್ಮಡಿ ನಿರ್ವಾಣಸ್ವಾಮಿ ಹೇಳಿದರು.

ಇಲ್ಲಿನ ಎಸ್‌.ಎನ್‌.ಪಬ್ಲಿಕ್‌ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನುಷ್ಯನಿಗೆ ಆರೋಗ್ಯವಿದ್ದರೆ ಎಲ್ಲ ಭಾಗ್ಯವು ಇದ್ದಂತೆ. ಕಾಯಿಲೆ ಬಂದ ಮೇಲೆ ವ್ಯಥೆಪಡುವ ಬದಲು ಕಾಯಿಲೆ ಬರದಂತೆ ತಡೆಗಟ್ಟುವುದು ಒಳ್ಳೆಯದು. ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯ ಒಂದು ಗಂಟೆಯಾದರೆ ದೇಹಕ್ಕೆ ವ್ಯಾಯಾಮ ಮಾಡಬೇಕು ಎಂದರು.

ಮಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಟಿ.ಬಸವರಾಜು ಮಾತನಾಡಿ, ದೇಶ ಸದೃಡವಾಗಬೇಕಾದರೆ ಜನರು ಆರೋಗ್ಯವಂತರಾಗಿರಬೇಕು. ಅದಕ್ಕಾಗಿ ಪ್ರಧಾನಿ ಫಿಟ್‌ ಇಂಡಿಯಾ ಕಾರ್ಯಕ್ರಮ ಜಾರಿಗೆ ತಂದರು. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಹಮತ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಎಸ್‌ಎನ್‌ ಪಬ್ಲಿಕ್‌ ಶಾಲೆಯು 5.5 ಕಿಲೋ ಮೀಟರ್‌ ದೂರದ ಕಾಲ್ನಡಿಗೆ ನಡೆಸುತ್ತಿದೆ. ಇದರಲ್ಲಿ 1,500 ಜನರು ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು.

22 ರ ಬೆಳಿಗ್ಗೆ 6ಕ್ಕೆ ದೇಗುಲ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಕಾಲ್ನಡಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಕರಡಿಗುಡ್ಡೆಯಲ್ಲಿರುವ ಎಸ್‌ಎನ್‌ ಪಬ್ಲಿಕ್‌ ಶಾಲೆಯವರೆಗೂ ಕಾಲ್ನಡಿಗೆಯಲ್ಲಿ ತೆರಳಲಾಗುವುದು ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲೆ ಮಮತಶ್ರೀ.ಎ.ಆರ್‌ ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಉಚಿತವಾಗಿ ಟಿ ಶರ್ಟ್ ನೀಡಲಾಗುವುದು. ಕಾಲ್ನಡಿಗೆ ಕಾರ್ಯಕ್ರಮದ ಮೂಲಕ ಜನರಿಗೆ ದೈಹಿಕ ಆರೋಗ್ಯ ಹಾಗೂ ದಿನ ನಿತ್ಯ ವ್ಯಾಯಾಮ ಬಗೆಗೆ ಅರಿವು ಮೂಡಿಸುವುದಾಗಿ ಹೇಳಿದರು.

10 ವರ್ಷದಿಂದ 18 ವರ್ಷ, 18 ವರ್ಷ ಮೇಲ್ಪಟ್ಟು ಎಂಬ ಎರಡು ವಿಭಾಗ ಇರುತ್ತದೆ. ಹೆಸರುಗಳನ್ನು ₹ 100 ಶುಲ್ಕದೊಂದಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ 96866 96865, 99001 03195 ಸಂಪರ್ಕಿಸುವಂತೆ ಮನವಿ ಮಾಡಿದರು. ಮ್ಯಾರಥಾನ್‌ನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್‌, ಪೊಲೀಸ್‌ ಇಲಾಖೆಯವರು, ನಗರಸಭೆಯವರು ಪಾಲ್ಗೊಳ್ಳಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT