ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸೋಮವಾರ ಅಳತೆ ಕಾರ್ಯ ನಡೆಯಿತು.

ಗ್ರಾಮದ ಅಳತೆಗಾಗಿ ಕಂದಾಯ ಮತ್ತು ಸರ್ವೆ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ಅಡ್ಡಪಡಿಸಿ, ನಮ್ಮ ಬೇಡಿಕೆ ಈಡೇರುವವರೆಗೂ ಅಳತೆ ಮಾಡಲು ಬಿಡುವುದಿಲ್ಲ ಎಂದು ತಡೆಹಿಡಿದಿದ್ದರು. ಆಗ ತಹಶೀಲ್ದಾರ್ ಮಂಜುನಾಥ್ ರೈತರಿಗೆ ತೊಂದರೆಯಾಗದಂತೆ ನೀವು ವಾಸಿಸುವ ಜಾಗವನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಿ, ಹಕ್ಕುಪತ್ರ ನೀಡುತ್ತೇವೆ. ಯಾರೂ ಭಯಪಡಬೇಡಿ. ಅಳತೆಗೆ ಅವಕಾಶ ನೀಡಿ ಎಂದು ತಿಳಿ ಹೇಳಿದರು.

ನೀವು ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ನೀಡಬೇಕಾದರೆ ಮೊದಲಿಗೆ ಗ್ರಾಮದ ಗಡಿ ಗುರುತಿಸಬೇಕು. ಹಾಗಾಗಿ ಅಳತೆ ಕಾರ್ಯ ಅನಿವಾರ್ಯ. ನೀವು ವಾಸಿಸುವ ಸರ್ವೆ ನಂಬರಿನ ಗಡಿ ಗುರುತಿಸಿ ಅದರ ಒಳಗಡೆ ಬರುವಂತಹ ಜಾಗವನ್ನು ಸರ್ಕಾರ ವಶಕ್ಕೆ ಪಡೆಯುವುದು. ನಂತರ ಮನೆ ನಿರ್ಮಿಸಿಕೊಂಡಿರುವ ಜಾಗದಲ್ಲಿ ನಿವೇಶನ, ಮನೆಗಳಿಗೆ ದಾಖಲೆ ಮಾಡಿ ಕ್ರಯಮಾಡಿ ಕೊಡಲಾಗುವುದು. ಪಂಚಾಯಿತಿ ವತಿಯಿಂದ ಇ-ಖಾತೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ಸಮಸ್ಯೆ ಇಲ್ಲದಂತೆ ಅಳತೆ ಕಾರ್ಯ ನೆರೆವೇರಿತು. ಹೊಂಗಾಣಿದೊಡ್ಡಿ ಗ್ರಾಮಸ್ಥರು, ಕಂದಾಯ ಅಧಿಕಾರಿಗಳು ಸರ್ವೆ ಅಧಿಕಾರಿಗಳು ಅಳತೆ ಕಾರ್ಯದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.