ಚನ್ನಪಟ್ಟಣ: ಯುವಪೀಳಿಗೆಗೆ ನಮ್ಮ ಭಾರತೀಯ ಜಾನಪದ ಕಲೆ, ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಭೂ ನ್ಯಾಯ ಮಂಡಳಿ ಸದಸ್ಯ ಬಿಡದಿ ಶೇಖರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನೀಲಕಂಠನಹಳ್ಳಿ ಸಮುದಾಯ ಭವನದಲ್ಲಿ ಸಂತೆಮೊಗೇನಹಳ್ಳಿಯ ಗಾನಸುಧೆ ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಲಾಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳು ಅಳಿವಿನಂಚಿನಲ್ಲಿವೆ. ಚಲನಚಿತ್ರಗಳ ಗೀತೆಗಳಿಗೆ ನಮ್ಮ ಯುವಜನತೆ ಮಾರು ಹೋಗಿದ್ದು, ಜಾನಪದ ಕಲೆ, ಪರಂಪರೆಯನ್ನು ಮರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಂಭವ ಇದೆ. ಹಾಗಾಗಿ ಯುವಜನತೆಯಲ್ಲಿ ಜಾನಪದ ಕಲೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸುಗಮ ಸಂಗಿತ, ಜಾನಪದ ಗಾಯನ, ಮಂಠೆಸ್ವಾಮಿ ಕಥಾ ಪ್ರಸಂಗ, ತತ್ವಪದ ಹಾಗೂ ವಚನ ಗಾಯನ, ಲಾವಣಿ ಹಾಡು, ಸೋಬಾನ ಹಾಡು, ರಂಗ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಜೊತೆಗೆ ಕಲಾವಿದರು ತಮಟೆ ವಾದನ, ಡೊಳ್ಳು ಕುಣಿತ, ಹಾಲಕ್ಕಿ ಕುಣಿತ, ಜನಪದ ನೃತ್ಯ, ಪೂಜಾಕುಣಿತ, ಬೀಸು ಕಂಸಾಳೆ, ಕರಗ ಕುಣಿತ, ಪಟದ ಕುಣಿತ ಪ್ರದರ್ಶಿಸಿದರು.

ಬೀದಿನಾಟಕ ಕಲಾವಿದ ಕನಕಪುರ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಅಪ್ಪಗೆರೆ ಶ್ರೀನಿವಾಸಮೂರ್ತಿ, ಚಕ್ಕೆರೆ ಲೋಕೇಶ್, ವೆಂಕಟೇಶ್, ಸಿದ್ದರಾಜು, ಹೊಂಬಾಳಯ್ಯ, ಅಪ್ಪಾಜಿ, ನಾಗರಾಜು, ಲಕ್ಷ್ಮಣ್, ಸದಾಕುಮಾರ್, ಲಕ್ಷ್ಮಮ್ಮ, ನಮನ ಶಿವಕುಮಾರ್, ಶ್ರೀಧರ್, ರೇಣುಕಾಪ್ರಸಾದ್, ಅಪ್ಪಗೆರೆ ಸತೀಶ್, ಎಸ್.ಬಿ. ಗಂಗಾಧರ್, ಮಹೇಶ್ ಮೌರ್ಯ, ಸುರೇಶ್, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.