ಗುರುವಾರ , ಡಿಸೆಂಬರ್ 12, 2019
20 °C

ಬಿಡದಿಗೆ ನಿತ್ಯಾನಂದ ಶಿಷ್ಯರ ಸ್ಥಳಾಂತರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಗುಜರಾತ್‌ ಹೈಕೋರ್ಟ್‌ನಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ನಿತ್ಯಾನಂದ ಸ್ವಾಮೀಜಿ ಶಿಷ್ಯರು ಅಹಮದಾಬಾದ್‌ನಿಂದ ಇಲ್ಲಿನ ಬಿಡದಿ ಧ್ಯಾನಪೀಠಕ್ಕೆ ಸ್ಥಳಾಂತರಗೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಿತ್ಯಾನಂದನ ಶಿಷ್ಯರು ಅಹಮದಾಬಾದ್‌ನಲ್ಲಿರುವ ಆಶ್ರಮವನ್ನು ಖಾಲಿ ಮಾಡುತ್ತಿದ್ದು, ಬಿಡದಿಯತ್ತ ವಲಸೆ ಬರುತ್ತಿದ್ದಾರೆ. ಅವರೊಂದಿಗೆ ಆಶ್ರಮ ಶಾಲೆಯ ಕೆಲವು ಮಕ್ಕಳನ್ನು ಕರೆತರಲಾಗುತ್ತಿದೆ ಎಂದು ಈ ಮೂಲಗಳು ತಿಳಿಸಿವೆ.

ಬಿಡದಿ ಧ್ಯಾನಪೀಠವು ನಿತ್ಯಾನಂದನ ಶಿಷ್ಯರ ಪಾಲಿಗೆ ಸುರಕ್ಷಿತ ಸ್ಥಳವಾಗಿದೆ. ಸುತ್ತಲೂ ಎತ್ತರವಾದ ಕಾಂಪೌಂಡ್‌ ವ್ಯವಸ್ಥೆ ಇದ್ದು, ಒಳಗಿನ ಚಟುವಟಿಕೆಗಳ ಮಾಹಿತಿ ಹೊರಗೆ ತಲುಪುವುದಿಲ್ಲ. ಆಶ್ರಮವು ತನ್ನದೇ ಆದ ಖಾಸಗಿ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದೆ. ಮಾಧ್ಯಮಗಳಿಗೂ ಪ್ರವೇಶವಿಲ್ಲ. ಪೊಲೀಸರು ಸಹ ಅನುಮತಿ ಪಡೆದೇ ಒಳ ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸದ್ಯ ಇದೇ ಪ್ರಶಸ್ತ ಸ್ಥಳ ಎಂದು ಅವರ ಶಿಷ್ಯಂದಿರು ಇಲ್ಲೇ ವಾಸ್ತವ್ಯ ಹೂಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ನಿತ್ಯಾನಂದ ಸ್ವಾಮೀಜಿ ಸುಳಿವು ಪತ್ತೆಯಾಗಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು