ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವ್ಯ ಬಚ್ಚಿಡದೆ ಜಗತ್ತಿಗೆ ಬಿಚ್ಚಿಡಬೇಕು’

ಕಸಾಪ ತಾಲ್ಲೂಕು ಘಟಕದಿಂದ ಕವಿಗೋಷ್ಠಿ, ಗೀತಗಾಯನ
Last Updated 27 ಡಿಸೆಂಬರ್ 2022, 5:08 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿಯಲ್ಲಿ ಹೊಸ ವರ್ಷದ ಅಂಗವಾಗಿ ಸೋಮವಾರ ಕಸಾಪ ತಾಲ್ಲೂಕು ಘಟಕದಿಂದ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮತ್ತೀಕೆರೆ ಬಿ. ಚಲುವರಾಜು ಮಾತನಾಡಿ, ‘ಕಾವ್ಯವನ್ನು ಜನರಿಗೆ ಸರಳ, ಸಂಕ್ಷಿಪ್ತ ಹಾಗೂ ಸಾರ್ವತ್ರಿಕವಾಗಿ ಹೇಳುವ ಕೆಲಸವಾಗಬೇಕು. ಕಾವ್ಯವನ್ನು ಬಚ್ಚಿಡುವುದಕ್ಕಿಂತ ಹೊರ ಜಗತ್ತಿಗೆ ಬಿಚ್ಚಿಡಬೇಕು’ ಎಂದು ಹೇಳಿದರು.

ವಚನಗಳು ಸಾಹಿತ್ಯ ಲೋಕದ ಬಹುಮುಖ್ಯ ಕಾವ್ಯ ಪ್ರಕಾರಗಳಾಗಿವೆ.ಅವುಗಳಲ್ಲಿ ಭಾಷಾ ಪ್ರೌಢಿಮೆ ಸಾರುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಳಕಳಿಯನ್ನು
ಜನರದ್ದೇ ಆಡು ಭಾಷೆಯಲ್ಲಿ ತಿಳಿಸುವ ವೈಶಿಷ್ಟ್ಯತೆ ಅಡಗಿದೆ. ವಚನಗಳು ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುತ್ತವೆ. ವ್ಯಾಕರಣ ವಿಶೇಷಣಗಳಿಂದ ದೂರ ಉಳಿದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡ ಕಾವ್ಯ
ಪ್ರಕಾರವಾಗಿ ಹೊರ ಹೊಮ್ಮಿವೆ. ಹೀಗಾಗಿ ಇವು ಜನರಿಗೆ ಇಷ್ಟವಾಗುತ್ತವೆ ಎಂದರು.

ಗ್ರಾಮದ ಹಿರಿಯ ಮುಖಂಡ ಕೆ. ತಿಮ್ಮೇಗೌಡ ಮಾತನಾಡಿ, ‘ನಮ್ಮ ಹಳೆಯ ತಲೆಮಾರಿನವರು, ಜನಪದರು ಹಾಡುವ ಗೀತೆಗಳು ಮರೆಯಾಗುತ್ತಿವೆ. ಇಂದಿನ ಗಾಯಕರು ಅವುಗಳನ್ನು ಮತ್ತೆ ಪ್ರಸ್ತುತಪಡಿಸಿ ಜನಮಾನಸದಲ್ಲಿ ಉಳಿಯುವಂತೆ ಪ್ರಚುರ ಪಡಿಸಬೇಕು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ, ಮತ್ತೀಕೆರೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಎಚ್.ಆರ್. ರಮೇಶ್, ಸಾಹಿತ್ಯ ಪರಿಚಾರಕರಾದ ಚಕ್ಕೆರೆ
ಪುಟ್ಟಸ್ವಾಮಿ, ಭಾನುಮತಿ, ದಿವ್ಯ, ಪುಟ್ಟಮ್ಮ, ನಿವೃತ್ತ ಅಧ್ಯಾಪಕ ಸಿ. ಚನ್ನವೀರೇಗೌಡ, ನಿವೃತ್ತ ಶಿಕ್ಷಕ ಸಿ. ಶ್ರೀನಿವಾಸ್ ಭಾಗವಹಿಸಿದ್ದರು.

ಮಂಜೇಶ್ ಬಾಬು, ಎಂ. ಶ್ರೀನಿವಾಸ ಅಬ್ಬೂರು ಕವಿತೆ ವಾಚಿಸಿದರು. ಗಾಯಕರಾದ ಕೆ.ಎಚ್. ಕುಮಾರ್, ಸಿ. ಪ್ರಸನ್ನಕುಮಾರ್, ಬಸವರಾಜು, ಶಿವರಾಜು, ಮುತ್ತುರಾಜು, ಮಿಮಿಕ್ರಿ ಶಂಕರ್ ಬಾಬು ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT