ರಾಮನಗರ: ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಮಹಿಳಾ ಕಾನ್ಸ್ಟೆಬಲ್ ಮತ್ತು ಅದನ್ನು ಪ್ರಶ್ನಿಸಿದ ಸಂಚಾರ ಠಾಣೆ ಕಾನ್ಸ್ಟೆಬಲ್ ನಡುವೆ ಮಂಗಳವಾರ ಬೀದಿಯಲ್ಲೇ ಮಾತಿನ ಚಕಮಕಿ ನಡೆಯಿತು. ಐಜೂರು ವೃತ್ತದಲ್ಲಿ ಇಬ್ಬರೂ ಸಾರ್ವಜನಿಕವಾಗಿ ಏಕವಚನದಲ್ಲಿ ಬೈದಾಡಿಕೊಂಡರು. ಕಡೆಗೆ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ಇಬ್ಬರನ್ನೂ ಸಮಾಧಾನಪಡಿಸಿ ಕಳಿಸಿದರು.

ಕರಗದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಕರಗ ಸಂಚರಿಸುವ ಮಾರ್ಗಗಳಲ್ಲಿ ಪೊಲೀಸ್ ಬಂದೋಬಸ್ತ್ ಕುರಿತು ಪರಿಶೀಲನೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸಹ ಪ್ರತಿಭಟನೆ ಹಮ್ಮಿಕೊಂಡಿದ್ದರು. ಹಾಗಾಗಿ, ಸಂಚಾರ ಠಾಣೆ ಸಿಬ್ಬಂದಿ ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇದೇ ಸಂದರ್ಭದಲ್ಲಿ ಐಜೂರು ಠಾಣೆ ಕಾನ್ಸ್ಟೆಬಲ್ ರುಕ್ಮಿಣಿ ಪಾಟೀಲ ಅವರು, ವೃತ್ತದಲ್ಲಿರುವ ಮೆಡಿಕಲ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದು ತಮ್ಮ ಬೈಕ್ ನಿಲ್ಲಿಸಲು ಮುಂದಾದರು. ಆಗ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಠಾಣೆ ಕಾನ್ಸ್ಟೆಬಲ್ ಮೋಹನ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಇಬ್ಬರ ನಡುವೆ ಶುರುವಾದ ಮಾತಿನ ಚಕಮಕಿ ಏಕವಚನಕ್ಕೆ ತಿರುಗಿ, ಪರಸ್ಪರ ಬೈದಾಡಿಕೊಂಡರು.

ಸ್ಥಳದಲ್ಲಿದ್ದ ಐಜೂರು ಠಾಣೆಯ ಎಎಸ್ಐ ನಾಗರಾಜು ಮತ್ತು ಇತರ ಸಿಬ್ಬಂದಿ ಇಬ್ಬರನ್ನೂ ಸಮಾಧಾನಪಡಿಸಿದರು. ಜೊತೆಗೆ ಸಾರ್ವಜನಿಕರು ಸಹ ಬುದ್ಧಿ ಹೇಳಿದರು. ಆದರೂ, ಮಾತಿನ ಚಕಮಕಿ ಜೋರಾಯಿತು. ಕಡೆಗೆ ಸಿಬ್ಬಂದಿ ಇಬ್ಬರನ್ನೂ ಸ್ಥಳದಿಂದ ಬೇರೆಡೆ ಕರೆದೊಯ್ದರು. ಕಾನ್ಸ್ಟೆಬಲ್ಗಳ ವಾಗ್ವಾದವನ್ನು ಸಾರ್ವಜನಿಕರು ಮೂಕಪ್ರೇಕ್ಷಕರಂತೆ ವೀಕ್ಷಿಸಿದರು. ಕೆಲವರು ವಿಡಿಯೊ ಚಿತ್ರೀಕರಿಸಿ ವಾಟ್ಸ್ಆ್ಯಪ್ಗಳಲ್ಲಿ ಸಹ ಹರಿಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.