ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಗೂ, ಜಟ್ಟಿಗಳಿಗೂ ಅವಿನಾಭಾವ ಸಂಬಂಧ: ಪ್ರಮೋದಾದೇವಿ ಒಡೆಯರ್

ಮೈಸೂರು ಸಂಸ್ಥಾನದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಭಿಮತ
Published 29 ಆಗಸ್ಟ್ 2023, 5:19 IST
Last Updated 29 ಆಗಸ್ಟ್ 2023, 5:19 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಮೈಸೂರು ಸಂಸ್ಥಾನಕ್ಕೂ, ಚನ್ನಪಟ್ಟಣದ ಜಟ್ಟಿಗಳಿಗೂ ಅವಿನಾಭಾವ ಸಂಬಂಧವಿದ್ದು, ದಸರಾ ಕುಸ್ತಿಯಲ್ಲಿ ಭಾಗವಹಿಸುವ ಜಟ್ಟಿಗಳು ಚನ್ನಪಟ್ಟಣದವರು ಎಂಬುದೇ ಇದಕ್ಕೆ ಸಾಕ್ಷಿ’ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ನಗರದ ಕೋಟೆಯಲ್ಲಿರುವ ಜಟ್ಟಿಗರ ಬೀದಿಯ ಗರಡಿಮನೆಯಲ್ಲಿ ಸೋಮವಾರ ನಡೆದ ಯಜುರುಪಾಕರ್ಮ ಹಬ್ಬದ ಮಟ್ಟಿ ಪೂಜೆ ಹಾಗೂ ಶ್ರೀ ನಿಂಬುಜಾದೇವಿ ಅಮ್ಮನವರ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

‘ಚನ್ನಪಟ್ಟಣದಲ್ಲಿನ ಜಟ್ಟಿಗಳ ಮೇಲೆ ಮೈಸೂರು ಸಂಸ್ಥಾನದ ಎಲ್ಲಾ ರಾಜರುಗಳ ಪ್ರೀತಿ–ವಿಶ್ವಾಸವಿತ್ತು. ಇಲ್ಲಿಯ ಜಟ್ಟಿಗಳ ಕುಸ್ತಿಯ ಕಲೆಗಾರಿಕೆ ಮೇಲೆ ರಾಜರಿಗಿದ್ದ ವಿಶ್ವಾಸವೇ ಇದಕ್ಕೆ ಸಾಕ್ಷಿ. ಪ್ರತಿ ವರ್ಷವೂ ಮೈಸೂರು ದಸರಾದ ವೇಳೆ ಬೊಂಬೆ ನಗರದ ಜಟ್ಟಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಈಗಲೂ ತಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ’ ಎಂದರು.

ನಿಂಬುಜಾದೇವಿ ಜಟ್ಟಿ ಜನಾಂಗದ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT