ಗುರುವಾರ , ಮೇ 26, 2022
23 °C

ಟಿಕೆಎಂ ಕಾರ್ಮಿಕ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ‘ಕಾರ್ಮಿಕರ ಜೊತೆಗೆ ಉತ್ತಮ ಸಾಮರಸ್ಯ ಮತ್ತು ಸಾಂಘಿಕ ಕೆಲಸಕ್ಕೆ ಉತ್ತೇಜನ ನೀಡಲಾಗುವುದು’ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರ ತಿಳಿಸಿದರು.

ಕಂಪನಿಯಲ್ಲಿ ನಡೆದ ಟಿಕೆಎಂ ಕಾರ್ಮಿಕ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕರ ಹಿತರಕ್ಷಣೆಗೆ ಕಂಪನಿ ಬದ್ಧವಾಗಿದೆ ಎಂದು ಹೇಳಿದರು.

ಟಿಕೆಎಂ ಕಾರ್ಮಿಕ ಸಂಘದ ನೂತನ ಅಧ್ಯಕ್ಷ ಎಸ್.ಆರ್. ದೀಪಕ್ ಮಾತನಾಡಿ, ಗುರಿ ಈಡೇರಿಸಿಕೊಳ್ಳಲು ಒಂದು ತಂಡವಾಗಿ ಆಡಳಿತ ಮಂಡಳಿ ಹಾಗೂ ಟಿಕೆಎಂ ಕಾರ್ಮಿಕ ಸಂಘ ಕೆಲಸ ಮಾಡಬೇಕಾಗಿದೆ. ಕಾರ್ಮಿಕ ಸಂಘದ ಬೆಂಬಲವನ್ನು ಆಡಳಿತ ಮಂಡಳಿಗೆ ನೀಡಲು ಬದ್ಧ ಎಂದು
ಹೇಳಿದರು.

ಉದ್ಯೋಗಿಗಳು ಮತ್ತು ಕಂಪನಿ ಪರಸ್ಪರ ಅವಲಂಬಿತರಾಗಿದ್ದಾರೆ. ಟಿಕೆಎಂ ನಿಯಮದ ಪ್ರಕಾರ ಪರಸ್ಪರ ಅಭಿಪ್ರಾಯ ಮತ್ತು ಗೌರವಿಸಿ ನಂಬಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು