ಬುಧವಾರ, ಜುಲೈ 28, 2021
23 °C

ರಾಮನಗರ: ಮತ್ತೊಬ್ಬ ವ್ಯಕ್ತಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಮತ್ತೊಬ್ಬರಿಗೆ ಕೋವಿಡ್‌-19 ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ನಗರದ ಕುಂಬಾರ ಬೀದಿ ನಿವಾಸಿಗಎೆ (ರೋಗಿ ಸಂಖ್ಯೆ 3313) ಸೋಮವಾರ ಸೋಂಕು ತಗುಲಿತ್ತು. ಗುರುವಾರ ಈತನ 23 ವರ್ಷದ ಮಗನಲ್ಲಿ ಸಹ ಸೋಂಕು ಇರುವುದು ಗೊತ್ತಾಗಿದೆ. ಕಳೆದ ಸೋಮವಾರ 18 ಮಂದಿಯನ್ನು ಕ್ವಾರಂಟೈನ್ ಮಾಡಿ, 60 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ 59 ವರದಿಗಳು ನೆಗೆಟಿವ್ ಬಂದಿದ್ದು, ಒಂದು ಮಾತ್ರವೇ ಪಾಸಿಟಿವ್ ಆಗಿದೆ. ಹೀಗಾಗಿ, 4 ದಿನದ ಹಿಂದೆ ಕ್ವಾರೆಂಟೈನ್‌ನಲ್ಲಿದ್ದ ಮಾದರಿಯನ್ನೆ ಮುಂದುವರಿಸಿದ್ದುಘಿ, ಹೊಸದಾಗಿ ಕ್ವಾರೆಂಟೈನ್‌ಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಗುರುವಾರ ಪತ್ತೆಯಾಗಿರುವ ಸೋಂಕಿತನಿಗೆ ರಾಮನಗರದ ಕಂದಾಯ ಭವನದಲ್ಲಿ ನಿರ್ಮಿಸಿರುವ ರೆಫರಲ್ ಕೋವಿಡ್ ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಳ್ಳಲಾಗಿದೆ. ಈ ಮೊದಲಿನ ಇಬ್ಬರು ಸೋಂಕಿತರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗು ಚೇತರಿಕೆ: ಕುದೂರಿನ ಮಾರಸಂದ್ರ ಗ್ರಾಮದಲ್ಲಿ ಮೇ 25ರಂದು 2ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಮಗುವಿಗೆ ತಮಿಳುನಾಡಿನ ಚೆನ್ನೈ ಮೂಲಕ ಸೋಂಕು ತಟ್ಟಿತ್ತು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಎರಡು ದಿನದ ಹಿಂದೆ ಮಗುವಿನ ಗಂಟಲು ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಈ ವರದಿಯು ನೆಗೆಟಿವ್ ಆಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.