ಮಡಿವಾಳ ಮಾಚಿದೇವರ ಜಯಂತಿ ಪ್ರಯುಕ್ತ ರಾಮನಗರದ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಮಾಚಿದೇವರ ಚಿತ್ರವನ್ನು ಮೆರವಣಿಗೆ ಮಾಡಲಾಯಿತು
ಶಿಕ್ಷಣದ ಜೊತೆಗೆ ಸಮುದಾಯವನ್ನು ಸಂಘಟಿಸಿ ಮುನ್ನಡೆಸುವ ಅಗತ್ಯವಿದೆ. ಯುವಜನರು ಉತ್ತಮ ವಿದ್ಯಾಭ್ಯಾಸದ ಜೊತೆಗೆ ದೈಹಿಕ ಶಕ್ತಿ ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಮರ ಕಲೆಗಳನ್ನು ಅಭ್ಯಾಸ ಮಾಡಬೇಕು
– ಹಾಸನ ರಘು ಸಮರ ಕಲೆಗಳ ತಜ್ಞ
ಶರಣರ ಚಳವಳಿ ಕೇವಲ ಧಾರ್ಮಿಕ ಚಳವಳಿಯಲ್ಲ. ಅದೊಂದು ಸಾಮಾಜಿಕ ಕ್ರಾಂತಿಯಾಗಿತ್ತು. ಮಡಿವಾಳ ಮಾಚಿದೇವರಂತಹ ಶರಣರು ಶ್ರಮಕ್ಕೆ ಗೌರವ ನೀಡುವ ಮೂಲಕ ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸಿದರು.
– ದೀಪಕ್ ಕುಮಾರ್ ಪ್ರಾಧ್ಯಾಪಕ
‘ರಾಜಕಾರಣಿಗಳ ಬಳಿ ಹಕ್ಕು ಕೇಳಿ’
‘ವಿವಿಧ ಸಮುದಾಯದ ಸಂಘಟನೆಗಳು ತಮ್ಮ ಸಮುದಾಯದ ಪುಣ್ಯ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಿ ರಾಜಕಾರಣಿಗಳು ಮತ್ತು ಗಣ್ಯರಿಗೆ ಸನ್ಮಾನ ಮಾಡಿ ಕಳಿಸಿದರೆ ಸಾಲದು. ತಮ್ಮ ಹಕ್ಕನ್ನು ಕೇಳಬೇಕು. ಇಲ್ಲದಿದ್ದರೆ ಏನೂ ಸಿಗುವುದಿಲ್ಲ. ರಾಮನಗರ ನಗರಸಭೆಯ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮಡಿವಾಳ ಸಮುದಾಯಕ್ಕೆ ಅಗತ್ಯ ಪರಿಕರ ನೀಡಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಸಮುದಾಯದ ಮೂಲ ಕಸುಬಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಧೋಬಿ ಘಾಟ್ ನಿರ್ಮಿಸುವ ಚಿಂತನೆ ಇದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.