ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ ಡಿಸಿ ಕಚೇರಿಯಲ್ಲಿ ಊಟ ಮಾಡುತ್ತಿದ್ದ ನೌಕರ ಹೃದಯಾಘಾತದಿಂದ ಸಾವು

Published 28 ಜೂನ್ 2024, 12:53 IST
Last Updated 28 ಜೂನ್ 2024, 12:53 IST
ಅಕ್ಷರ ಗಾತ್ರ

ರಾಮನಗರ: ನಗರದ ಜಿಲ್ಲಾಧಿಕಾರಿ ಕಚೇರಿ 'ಡಿ' ಗ್ರೂಪ್ ನೌಕರರೊಬ್ಬರು ಶುಕ್ರವಾರ ಮಧ್ಯಾಹ್ನ ಊಟ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ಕಂದಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಚನ್ನಪಟ್ಟಣದ ಯೋಗೇಶ್ ಕುಮಾರ್ (43) ಮೃತರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಯೋಗೇಶ್ ಅವರು, ತಮ್ಮ ಕುರ್ಚಿಯಲ್ಲಿ ಊಟ ಮಾಡುತ್ತಾ ಕುಳಿತಿದ್ದರು. ಆಗ ಒಮ್ಮೆಲೆ ಹೃದಯ ಹಿಡಿದುಕೊಂಡು ನೆಲಕ್ಕೆ‌ ಕುಸಿದಿದ್ದಾರೆ. ಪಕ್ಕದಲ್ಲಿದ್ದವರು ತಕ್ಷಣ ಓಡಿ ಬಂದು, ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಅಷ್ಟೊತ್ತಿಗಾಗಲೇ ಯೋಗೇಶ್ ಕೊನೆಯುಸಿರೆಳೆದಿದ್ದರು. ಘಟನೆಯು ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತ ಯೋಗೇಶ್ ಅವರಿಗೆ ಪತ್ನಿ ಮತ್ತು ‌ಇಬ್ಬರು ಪುತ್ರರಿದ್ದಾರೆ. ಈ ಪೈಕಿ ಒಬ್ಬರು 4ನೇ ತರಗತಿಯಲ್ಲಿ ಹಾಗೂ ಮತ್ತೊಬ್ಬ 9ನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಕಚೇರಿಯ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT