ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ

Published 28 ಮಾರ್ಚ್ 2024, 13:30 IST
Last Updated 28 ಮಾರ್ಚ್ 2024, 13:30 IST
ಅಕ್ಷರ ಗಾತ್ರ

ರಾಮನಗರ: ರಾಜ್ಯ ಸರ್ಕಾರ 2024-25ನೇ ಸಾಲಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯನ್ನು ನವೀಕರಿಸುವ ಹಾಗೂ ಹೊಸದಾಗಿ ನೋಂದಣಿ ಮಾಡಲು ಜ. 1ರಿಂದ ಚಾಲನೆ ನೀಡಿದೆ. ಮಾರ್ಚ್ 31ರವರೆಗೂ ನೋಂದಣಿ ಮಾಡಿಸಬಹುದು. ಈಗಾಗಲೇ ನೋಂದಾಯಿತ ಫಲಾನಾಭವಿಗಳು ಸಂಬಂಧಪಟ್ಟ ಸಹಕಾರ ಸಂಘಗಳಲ್ಲಿ ನವೀಕರಿಸಿಕೊಳ್ಳಬಹುದಾಗಿದೆ.

ಯೋಜನೆಯ ಅವಧಿಯು  2024 ಏಪ್ರಿಲ್‌ನಿಂದ 2025ರ ಮಾರ್ಚ್ 31ವರೆಗೆ ಇರಲಿದೆ. 

ಪರಿಷ್ಕೃತ ಮಾರ್ಗಸೂಚಿಗಳಂತೆ ₹30 ಸಾವಿರ ಹಾಗೂ ಅದಕ್ಕಿಂತ ಕಡಿಮೆ ವೇತನ ಪಡೆಯುವ ಸಹಕಾರ ಸಂಘಗಳ ನೌಕರರು ಹಾಗೂ ಖಾಸಗಿ ನೌಕರರು ಅವರ ಅರ್ಹ ಕುಟುಂಬ ಸದಸ್ಯರು ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. (ಸಹಕಾರ ಸಂಘದ ನೌಕರರು ಮೂರು ವರ್ಷ ಸೇವೆ ಮತ್ತು ₹30 ಸಾವಿರ ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ಬಗ್ಗೆ ಸಹಕಾರ ಸಂಘದ ಆಡಳಿತ ಮಂಡಳಿ ಅನುಮೋದನೆಯ ದೃಢೀಕರಣ ಪತ್ರ ಲಗತ್ತಿಸಬೇಕು)

ನಗರ ಅಥವಾ ಗ್ರಾಮೀಣ ಪ್ರದೇಶದ ಯಾವುದೇ ಸಹಕಾರ ಸಂಘಗಳು ಅಥವಾ ಅದಕ್ಕೆ ಸಂಯೋಜಿಸಲ್ಪಟ್ಟ ಸ್ವಸಹಾಯ ಗುಂಪುಗಳ ಸದಸ್ಯರು ಕನಿಷ್ಠ ಮೂರು ತಿಂಗಳು ಸದಸ್ಯರಾಗಿದ್ದಲ್ಲಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಸದಸ್ಯರು ವಂತಿಗೆ ಹಣ ಪಾವತಿಸುವಂತಿಲ್ಲ. ಅವರ ವಂತಿಗೆಯನ್ನು ಸರ್ಕಾರ ಭರಿಸಲಿದೆ. ಹೊಸದಾಗಿ ಸದಸ್ಯತ್ವ ಪಡೆಯಲು ಹಾಗೂ ನವೀಕರಿಸಲು ಮಾರ್ಚ್ 31 ಅಂತಿಮ ದಿನವಾಗಿದ್ದು, ಎಲ್ಲಾ ಸದಸ್ಯರು ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಹತ್ತಿರದ ಸಹಕಾರ ಸಂಘಗಳನ್ನು ಸಂರ್ಪಕಿಸಬಹುದು. ಅಥವಾ ಯಶಸ್ವಿನಿ ಕೋ ಆರ್ಡಿನೇಟರ್ ವಿಜಯ್‌ಕೃಷ್ಣ ಮೊಬೈಲ್ ಸಂಖ್ಯೆ: 9632355012 / 7975838556 ಸಂಪರ್ಕಿಸಬೇಕು ಎಂದು ಚನ್ನಪಟ್ಟಣ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ.ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT